ⓘ ಸಂಗೀತ

ಸಂಗೀತ

ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ.

ಕರ್ನಾಟಕ ಸಂಗೀತ

ಕರ್ನಾಟಕ ಸಂಗೀತ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು. ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ ರಾಗ ಮತ್ತು ತಾಳ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಹಿಂದುಸ್ತಾನಿ ಸಂಗೀತ ಭಾರತದ ಎರಡು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದು; ಉತ್ತರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾಗಶಃ ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಾಗಿದೆ. ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದೆ. ೧೩-೧೪ ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಆಡಳಿತ ಪ್ರಾರಂಭವಾದ ನಂತರ ಅನೇಕ ಸಂಗೀತಗಾರರು ಈ ರಾಜರ ಬಳಿ ಆಶ್ರಯ ಪಡೆದರು. ಮುಸ್ಲಿಮ್ ರಾಜರ ಆಸ್ಥಾನಗಳಲ್ಲಿ ಭಾರತೀಯ ಸಂಗೀತ ಪರ್ಷಿಯದ ಸಾಕಷ್ಟು ಸಂಗೀತ ತತ್ವಗಳನ್ನು ತನ್ನದಾಗಿಸಿಕೊಂಡಿತು. ಈ ಸಂಯುಕ್ತ ಸಂಪ್ರದಾಯ ಹಿಂದುಸ್ತಾನಿ ಸಂಗೀತವಾಗಿ ಬೆಳವಣಿಗೆ ಹೊಂದಿದೆ. ಮೊಘಲ್ ಕಾಲದ ಪ್ರಸಿದ್ಧ ಸಂಗೀತಗಾರ ಅಮೀರ್ ಖುಸ್ರೋ - ವೈದಿಕ ಸಂಪ್ರದಾಯದ ಸಂಗೀತ ...

ಸಂಗೀತ ನಾಟಕ ಅಕಾಡೆಮಿ

ಸಂಗೀತ ನಾಟಕ ಅಕಾಡೆಮಿ ಸಂಗೀತ, ನಾಟಕ ಮತ್ತು ನೃತ್ಯ ಕಲೆಗಳನ್ನು ಪೋಷಿಸಲು ಭಾರತ ಸರಕಾರ ಹುಟ್ಟುಹಾಕಿದ ರಾಷ್ಟ್ರ ಮಟ್ಟದ ಸಂಸ್ಥೆ.

ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು

ಕೆಎಸ್ ಜಿಎಚ್ ಸಂಗೀತ ಮತ್ತು ಕಲೆ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ,ಸಂಗೀತದ ಸಂಶೋಧನೆ ಮತ್ತು ಪ್ರದರ್ಶನ ಕಲೆಗಳಿಗಾಗಿ ಮುಡಿಪಾಗಿಟ್ಟ ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿದೆ.ಇದು ಕರ್ನಾಟಕದ ಸರ್ಕಾರದ ಸಂಸ್ಥೆಯಾಗಿದೆ.ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಶಿಕ್ಷಣ ಒದಗಿಸುತ್ತದೆ.೨೦೦೯ರಲ್ಲಿ ಪ್ರಾರಂಭವಾಯಿತು.

ಸತ್ಯಂ

ಈ ಲೇಖನವು ಸಂಗೀತ ನಿರ್ದೇಶಕ ಸತ್ಯಂ ಅವರ ಬಗ್ಗೆ. ಸತ್ಯಂ - ಮಾಹಿತಿ ತಂತ್ರಜ್ಞಾನ ಕಂಪನಿಯ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ. ಸತ್ಯಂ - ಕನ್ನಡ ಚಿತ್ರರಂಗದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿದ್ದರು. ಹಾರ್ಮೋನಿಯಂನಿಂದ ಸಂಗೀತ ನೀಡಿದವರಿದ್ದಾರೆ,ವೀಣೆಯಿಂದ ಸಂಗೀತ ನೀಡಿದವರಿದ್ದಾರೆ,ಗಿಟಾರದಿಂದಲೂ ಸಂಗೀತ ನೀಡಿದವರಿದ್ದಾರೆ.ಆದರೆ "ಡೋಲಕ್" ನಿಂದ ಸಂಗೀತ ನಿರ್ದೇಶನ ಮಾಡಿದ ಏಕೈಕ ಸಂಗೀತ ನಿರ್ದೇಶಕರೆಂದರೆ "ಸತ್ಯಂ". ಸತ್ಯಂ ಮೂಲತ: ತೆಲುಗಿನವರು.ಸತ್ಯಂ ಅವರ ಪೂರ್ಣ ಹೆಸರು"ಚೌಳ್ಳ ಪಿಳ್ಳೆ ಸತ್ಯ ನಾರಾಯಣ ಶಾಸ್ತ್ರಿ ಜನಿಸಿದ್ದು ೧೯೩೫ ಮೇ ೧೭ ರಂದು ಆಂದ್ರ ಪ್ರದೇಶದ ವಿಜಯ ನಗರ ಜಿಲ್ಲೆಯ ಗಾದೆವಲಪ ಗ್ರಾಮದಲ್ಲಿ.ತಾಯಿ ಕಾಂತಮ್ಮ ಉತ್ತಮ ಹಾಡುಗಾರ್ತಿ,ತಂದೆ ಹನುಮಂತ ಶಾಸ್ತ್ರಿಗಳು ಕೂಡಾ ಭಾಗವತ ಮೇಳಗಳಿಗೆ ಪ್ರಸಿದ್ಧರಾದವರು.ಅವರ ಹಾಡೆಂದರೆ ಜ ...

                                     

ಉಸ್ತಾದ್ ಅಮೀರ ಖಾನ್

ಉಸ್ತಾದ್ ಅಮೀರ ಖಾನ್ ಇವರು ಸುಪ್ರಸಿದ್ಧ ಹಿಂದುಸ್ತಾನಿ ಖಯಾಲ್ ಗಾಯಕರು ಮತ್ತು ಇಂದೂರ್ ಘರಾಣೆಯ ಸಂಸ್ಥಾಪಕರು. ಅನೇಕ ಹಿಂದುಸ್ಥಾನಿ ಶೈಲಿಯ ಗಾಯಕರು ಇವರಿಂದ ಪ್ರಭಾವಿತರಾಗಿದ್ದಾರೆ.

                                     

ಕನಕಾಂಗಿ

ಇದು ಪ್ರಥಮ ಇಂದು ಚಕ್ರದ ಪ್ರಥಮ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿಗ೧ ಮ೦ ಪ ದ೧ ನಿ೧ ಸ ಅವರೋಹಣ ಸ ನಿದ೧ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ.

                                     

ಥ್ರಿಲರ್

ಥ್ರಿಲರ್ ಅಮೇರಿಕದ ಹಾಡುಗಾರ ಮೈಕಲ್ ಜ್ಯಾಕ್‌ಸನ್‌ರ ಆರನೆಯ ಧ್ವನಿಸುರುಳಿ. ಜ್ಯಾಕ್ಸನ್‌ರ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯದ ದೃಷ್ಟಿಯಿಂದ ಸಫಲವಾಗಿದ್ದ ೧೯೭೯ರ ಧ್ವನಿಸುರುಳಿ ಆಫ್ ದ ವಾಲ್ ‌ನ ಮುಂಬರಿವಾಗಿ ಈ ಧ್ವನಿಸುರುಳಿಯನ್ನು ನವೆಂಬರ್ ೩೦, ೧೯೮೨ರಂದು ಎಪಿಕ್ ರಿಕಾರ್ಡ್ಸ್‌ನಿಂದ ಬಿಡುಗಡೆಮಾಡಲಾಯಿತು. ಥ್ರಿಲರ್, ಸರಳ ಭಾವುಕ ಶೈಲಿ, ಡಿಸ್ಕೋ, ಭಾವನಾತ್ಮಕ ಸಂಗೀತ, ರಿದಮ್ ಅಂಡ್ ಬ್ಲೂಸ್, ಹಾಗೂ ಪಾಪ್ ಒಳಗೊಂಡಂತೆ, ಆಫ್ ದ ವಾಲ್ ಅಂತಹದೇ ಬಗೆಗಳನ್ನು ಅನ್ವೇಷಿಸುತ್ತದೆ.

                                     

ಬ್ರಿಜ್ ಭೂಷಣ್ ಕಾಬ್ರಾ

ಬ್ರಿಜ್ ಭೂಷಣ್ ಕಾಬ್ರಾ ಇವರು ಹಿಂದುಸ್ತಾನಿ ಶಾಸ್ತ್ರೀಯ ಹವಾಯಿಯನ್ ಗಿಟಾರ್ ವಾದಕರು. ಇವರು ಪ್ರಸಿದ್ಧ ಸರೋದ್ ವಾದಕ ಉಸ್ತಾದ್ ಅಲಿ ಅಕ್ಬರ್ ಖಾನ್ ಇವರ ಶಿಷ್ಯರು. ಇವರು ಹವಾಯಿಯನ್ ಗಿಟಾರ್ ವಾದ್ಯವನ್ನು ಹಿಂದುಸ್ತಾನಿ ಶೈಲಿಗೆ ಅಳವಡಿಸಿದರು. ಇವರು ಪ್ರಸಿದ್ಧ ವಾದಕರಲ್ಲದೇ ಉತ್ತಮ ಶಿಕ್ಷಕರು ಹೌದು. ಇವರು ನಾದ ಯೋಗ ಮೇಲೆ ಹೆಚ್ಚಿನ ಸಂಶೋಧನೆಯನ್ನು ಮಾಡಿದ್ದಾರೆ.

                                     

ಮೇಳಕರ್ತ ರಾಗಗಳ ಪಟ್ಟಿ

ಕರ್ನಾಟಕ ಸಂಗೀತದಲ್ಲಿ ಎರಡು ಬಗೆಯ ಮೇಳಕರ್ತ ಪದ್ಧತಿಗಳು ರೂಢಿಯಲ್ಲಿವೆ. ಈಗ ಹೆಚ್ಚಿಗೆ ಪ್ರಚಾರದಲ್ಲಿರುವುದು ಸಂಪೂರ್ಣಮೇಳಗಳ ಪದ್ಧತಿ. ಈ ಪದ್ಧತಿಯಲ್ಲಿ, ಎಲ್ಲ ಮೇಳಕರ್ತ ರಾಗಗಳೂ ಕ್ರಮ ಸಂಪೂರ್ಣ ಆರೋಹಣ-ಅವರೋಹಣ ಸಂಚಾರಗಳನ್ನು ಹೊಂದಿರುತ್ತವೆ, ಈ ಕೆಳಗಿನ ಪಟಿಯಲ್ಲಿ ಈ ಪದ್ಧತಿಗೆ ಸೇರಿದ ಮೇಳಕರ್ತರಾಗಗಳನ್ನು ಸೂಚಿಸಲಾಗಿದೆ, ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ಅಸಂಪೂರ್ಣ ಮೇಳ ಪದ್ಧತಿಯನ್ನು ಅನುಸರಿಸಿ ಕೃತಿರಚನೆ ಮಾಡಿದ್ದಾರೆ. ಅದರಲ್ಲಿಯ ಮೇಳ ರಾಗಗಳ ಲಕ್ಷಣವೂ, ಹೆಸರುಗಳೂ ಬೇರೆಯಾಗಿವೆ.