ⓘ ಜೀವನ

ಜೀವನ

ಜೀವನ ವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಅದರ ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತೇವೆ. ಅದಕ್ಕೆ ಸಮಾಧಾನವೇ ಔಷಧಿ.

ಹೊಸ ಜೀವನ

ಹೊಸ ಜೀವನ ಚಿತ್ರವು ೨೬ ಜೂಲೈ ೧೯೯೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಭಾರ್ಗವರವರು ನಿರ್ದೇಶಿಸಿದ್ದಾರೆ. ಎಸ್.ಶೈಲೇಂದ್ರ ಬಾಬುರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಶಂಕರನಾಗ್ ನಾಯಕನ ಪಾತ್ರದಲ್ಲಿ ಮತ್ತು ದೀಪಿಕರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಹಂಸಲೇಖರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ನಿಜ ಜೀವನ

ನಿಜ ಜೀವನಕ್ಕೆ ಹಲವು ಅರ್ಥಗಳಿವೆ. ಸಾಮಾನ್ಯವಾಗಿ ಸೈಬರ್ ಲೋಕದ ಹೊರಗಿರುವ ಕಲ್ಪನಾತ್ಮಕವಲ್ಲದ ಪರಿಸರ, ಜಗತ್ತು. ದಿನನಿತ್ಯ ಜೀವನದ ಜಗತ್ತನ್ನು ಸೈಬರ್ ಲೋಕದಿಂದ ಬೇರ್ಪಡಿಸಿ ಉದ್ದೇಶಿಸುವಾಗ ನಿಜ ಜೀವನ ಅಥವಾ Real Life ಎನ್ನುತ್ತಾರೆ.

ಅಲೆಮಾರಿಜನ ಜೀವನ

ಒಂದು ಕಡೆ ಬಹುಕಾಲ ನೆಲೆಯಾಗಿ ನಿಲ್ಲದೆ, ಜೀವನೋಪಾಯಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುವ ಜನಕ್ಕೆ ಅಲೆಮಾರಿಗಳೆನ್ನುತ್ತಾರೆ. ಪ್ರಾಚೀನ ಮಾನವನ ಇತಿಹಾಸವನ್ನು ಪರೀಶೀಲಿಸಿದಾಗ, ಆತ ತನ್ನ ಜೀವನೋಪಾಯಕ್ಕಾಗಿ ಬೇಟೆಯಾಡುವುದು, ಮೀನು ಹಿಡಿಯುವುದು, ವ್ಯವಸಾಯ, ಪಶುಪಾಲನೆ-ಮುಂತಾದುವನ್ನು ಅವಲಂಬಿಸಿಕೊಂಡಿದ್ದದು ಕಂಡುಬರುತ್ತದೆ. ವ್ಯವಸಾಯ ಮತ್ತು ಪಶುಪಾಲನೆಗೆ ನೀರು ಅತ್ಯಗತ್ಯ. ಮೀನು ಹಿಡಿಯುವುದಕ್ಕೂ ಬೇಟೆಗೂ ತಕ್ಕ ಸನ್ನಿವೇಶ ಸದಾಕಾಲವೂ ಒಂದೇ ಸ್ಥಳದಲ್ಲಿ ದೊರೆಯದಿದ್ದಾಗ, ಜಲದ ಅಭಾವ ತಲೆದೋರಿದಾಗ ಅವನ್ನರಸಿಕೊಂಡು ಮನುಷ್ಯ ಅಲೆದಾಡುವುದು ಸ್ವಾಭಾವಿಕ. ಈ ದೃಷ್ಟಿಯಿಂದ ಆದಿಮಾನವ ಅಲೆಮಾರಿಯಾಗಿ ತನ್ನ ಜೀವನವನ್ನು ಪ್ರಾರಂಭಿಸಿದನೆನ್ನಬಹುದು. ಹಳೆ ಮತ್ತು ನವ ಶಿಲಾಯುಗದ ಜನ ಚೂಪಾದ ಕಲ್ಲಿನ ಆಯುಧಗಳಿಂದ ಮೃಗಗಳನ್ನು ಬೇಟೆಯಾಡಿ, ಗೆಡ್ಡೆಗೆಣಸುಗಳನ ...

ಕನ್ನಡದಲ್ಲಿ ಜೀವನ ಚರಿತ್ರೆಗಳು

ಕನ್ನಡದಲ್ಲಿ ಜೀವನ ಚರಿತ್ರೆ:- ಕನ್ನಡದಲ್ಲಿ ಜೀವನ ಚರಿತ್ರೆಯ ಇತಿಹಾಸ ಅಷ್ಟೊಂದು ಪ್ರಾಚೀನವೇನಲ್ಲ ಆದರೂ ಕರ್ನಾಟಕದಾದ್ಯಂತ ವಿಪುಲವಾಗಿ ಹರಡಿರುವ ಮಾಸ್ತಿಕಲ್ಲು. ವೀರಗಲ್ಲುಗಳಲ್ಲಿ, ಇನ್ನಿತರ ಶಿಲಾಶಾಸನಗಳಲ್ಲಿ ವ್ಯಕ್ತಿಗಳ ಜೀವನಕಥೆ ಮಿಂಚಿ ಮರೆಯಾಗುತ್ತದೆ.

ರಾಮ

ಭಾರತದಲ್ಲಿ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. ಅಯೋಧ್ಯೆಯ ರಾಜನಾಗಿದ್ದ ದಶರಥನ ನಾಲ್ಕು ಜನ ಮಕ್ಕಳಲ್ಲಿ ಹಿರಿಯನು ರಾಮ. ಆತನ ತಾಯಿ ಕೌಸಲ್ಯೆ. ಲಕ್ಷ್ಮಣ, ಭರತ, ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ. ಆಗ ಆಕೆ ತನ್ನ ಅಣ್ಣ ಲಂಕಾಧಿಪತಿ, ಮಹಾಶಿವಭಕ್ತ ರಾವಣನಿಗೆ ದೂರು ನೀಡಿ ಸೀತೆಯು ಸುಂದರಿಯೆಂದು ಆಕೆಯನ್ನು ನೀನು ವರಿಸಿದರೆ ಬಹಳ ಚೆಂದವೆಂದು ಹೇಳುವಳು. ಆಗ ರಾವಣ ಮಾಯಾವೇಶ ಧರಿಸಿ ಸೀತೆಯನ್ನು ಅಪಹರಿಸುವನು. ಶ್ರೀರಾಮ-ಲಕ್ಷ್ಮಣರು ಸೀತೆಯನ್ನು ಅರಸುತ್ತಾ, ವಾನರರ ಸಹಾಯ ಪಡೆದು ರಾವಣನನ್ನು ಸಂಹರಿಸಿ, ಸೀತೆಯನ್ನು ಅಗ್ನಿಪ್ರವೇಶದ ಮೂಲಕ ಪುನೀತಳನ್ನಾಗಿಸಿ ಮರಳಿ ಅಯೋಧ್ಯೆಗೆ ಕರೆತರುತ್ತಾನೆ. ಶ್ರೀರಾಮನು ತಂದೆ ಮ ...

ಜೀವನ ಚೈತ್ರ

ಜೀವನ ಚೈತ್ರ - ೧೯೯೨ರಲ್ಲಿ ಬಿಡುಗಡೆಯಾದ, ದೊರೈ- ಭಗವಾನ್ ನಿರ್ದೇಶಿಸಿರುವ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಈ ಚಿತ್ರ ೩ ವರ್ಷಗಳ ನಂತರ ಚಿತ್ರರಂಗಕ್ಕೆ ರಾಜ್ ಕುಮಾರ್ರವರ ಮರುಪ್ರವೇಶವಾಗಿತ್ತು. ಇದೊಂದು ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ. ಪ್ರಾರಂಭದಲ್ಲಿ ಈ ಚಿತ್ರವನ್ನು ಸಿಂಹಾದ್ರಿಯ ಸಿಂಹ ಎಂದು ಹೆಸರಿಸಲಾಗಿತ್ತು. ಈ ಚಿತ್ರದಿಂದ ರಾಜ್ ಕುಮಾರ್ ಕನ್ನಡ ಪ್ರೇಕ್ಷಕರ ಮೇಲಿನ ತಮ್ಮ ಹಿಡಿತವನ್ನು ಮತ್ತೊಮ್ಮೆ ತೋರಿಸಿದರು. ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿನ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗು ಡ ...

ಅಡುಗೆ ಬಡ್ತಿಯರು

ಅಡುಗೆ ಮಾಡುವುದೂ ಒಂದು ಕಲೆ.ಇದಕ್ಕೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಇದೆ. ಹಿಂದಿನ ಕಾಲದಲ್ಲಿ ಪುರುಷರು ಮಾತ್ರ ಸಂಪಾದನೆ ಅಥವಾ ಸೇವಾಮನೋಭಾವದಿಂದ ಬೇರೆಯವರ ಮನೆ ಅಥವಾ ಸಭೆ ಸಮಾರಂಭಗಳಲ್ಲಿ ಅಡುಗೆ ಮಾಡುತ್ತಿದ್ದರು. ಇಂಥವರನ್ನು ಅಡುಗೆ ಬಟ್ಟರೆಂದು ಕರೆಯುತ್ತಿದ್ದರು. ಈಗ ಬದಲಾದ ಕಾಲಘಟ್ಟದಲ್ಲಿ ಪುರುಷಂತೆ ಮಹಿಳೆಯರೂ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಾರೆ, ಅಡುಗೆಯನ್ನೂ ಮಾಡುತ್ತಿದ್ದಾರೆ. ಇಂಥವರನ್ನು ಅಡುಗೆ ಬಡ್ತಿಯರು ಎಂದೇ ಕರೆಯುತ್ತಾರೆ. ಅಡುಗೆ ಮಾಡುವುದು ಈಗ ಸ್ವಲ್ಪ ಸಂಕೀರ್ಣವಾಗುತ್ತಿದೆ. ಹಿಂದಿನಂತೆ ಸರಳವೂ ಅಲ್ಲ, ಸುಲಭವೂ ಅಲ್ಲ. ಹಾಗಾಗಿ ಪ್ರತಿ ಮನೆಯ ಮತ್ತು ಸಂದರ್ಭದ ಅಭಿರುಚಿ ಮತ್ತು ಔಚಿತ್ಯವನ್ನು ಅರಿತೇ ಅಡುಗೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಯಶಸ್ವಿಯಾದ ...

ಆತ್ಮಹತ್ಯೆ

ಆತ್ಮಹತ್ಯೆ ಎಂದರೆ ಸ್ವ ಪ್ರೇರಣೆಯಿಂದ ಪ್ರಾಣವನ್ನು ನೀಗುವುದು. ಹಲವು ಬಗೆಗಳಲ್ಲಿ ಅತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಸಾಯಲು ತವಕಿಸಿ, ಆತ್ಮಹತ್ಯೆಗೆ ಮಾರ್ಗಗಳನ್ನು ಹುಡುಕುತ್ತಾರೆ.

ಆಹಾರ

ಆಹಾರ ಸಾಮಾನ್ಯವಾಗಿ ಪಿಷ್ಟ, ಕೊಬ್ಬು ಮತ್ತು/ಅಥವಾ ಪ್ರೋಟೀನ್‍ಗಳನ್ನು ಒಳಗೊಂಡು, ಜೀವಿಗಳು ಪೋಷಕಾಂಶಗಳಿಗಾಗಿ ಅಥವಾ ಸಂತೋಷಕ್ಕಾಗಿ ತಿನ್ನುವ ಪದಾರ್ಥಗಳು. ಆಹಾರ ಎನ್ನುವುದು ಸಾಮಾನ್ಯವಾಗಿ ಸಸ್ಯಗಳಿಂದ, ಪ್ರಾಣಿಗಳಿಂದ ಅಥವಾ ಕೊಳೆಹಾಕಿದ ಪಾನೀಯಗಳು ಸಿಗುವುದು. ಮೊದಮೊದಲು ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ಈಗ ತನಗೆ ಬೇಕಾದ ವಸ್ತುಗಳನ್ನು ವ್ಯವಸಾಯ, ಮೀನುಗಾರಿಕೆ, ಬೇಟೆ, ಹುಡುಕಾಟ ಮತ್ತಿತರ ವಿಧಾನದಿಂದ ಪಡೆಯುತ್ತಾನೆ. ಪ್ರತಿಯೊಂದು ಪ್ರ್ಯಾಂತ್ಯ, ಧಮ೯ ಕೂಡ ತನ್ನದೇ ಆದ ವಿಶಿಷ್ಟ ಆಹಾರ ಪಧ್ಧತಿ, ತಯಾರಿಕೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಆಹಾರ ಕೇವಲ ಉಪಯೋಗಿಸುವುದಕ್ಕೆ ಅಲ್ಲದೇ ಕೆಲವೊಂದು ಆಹಾರಗಳಿಂದ ಅದು ಯಾವ ಪ್ರ್ಯಾಂತ್ಯದ್ದು ಎಂದು ಹೇಳುವಷ್ಟು ವಿಶಿಷ್ಟವಾದ ಆಹಾರಗಳಿದ್ದು, ಅವು ...

ತಾಯಿ

ತಾಯಿ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಲೇಖನ ತಾಯಿ ಚಲನಚಿತ್ರ ಮತ್ತು ಅವ್ವ ಚಲನಚಿತ್ರ ಪುಟದಲ್ಲಿದೆ. ತಾಯಿ ಎಂಬುದು ಒಂದು ಪ್ರಾಣಿಗೆ ಜನ್ಮ ಕೊಡುವ ನೈಸರ್ಗಿಕ ಸ್ತ್ರೀಯಾಗಿರಬಹುದು, ಅಥವಾ ಸಾಮಾಜಿಕವಾಗಿ ಪೋಷಿಸುವ ಸ್ತ್ರೀಯಾಗಿರಬಹುದು. ಹಲವು ಬಾರಿ ಈ ಎರಡು ಕಾರ್ಯಗಳನ್ನು ಒಬ್ಬಳೇ ಮಾಡಬಹುದು.

ತಾರುಣ್ಯ

ತಾರುಣ್ಯ ಎಂದರೆ ಮನುಷ್ಯರ ಜೀವನದಲ್ಲಿ ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುವ ಮಧ್ಯಂತರ ಪ್ರಾಯ.ಇದು ಸುಮಾರು ೧೬ ರಿಂದ ೨೫ ವಯೋಮಾನದ ಕಾಲ.ಇದು ವ್ಯಕ್ತಿ ದೈಹಿಕವಾಗಿ,ಮಾನಸಿಕವಾಗಿ ಬದಲಾಗುವ ಸಮಯ.

ದೋಸೆ

ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ತಿರುವಿ ಒಂದು ರಾತ್ರಿಯ ವರೆಗೆ "ಹುದುಗಲು" ಬಿಡುವುದರ ಮೂಲಕ ಸಿದ್ಧಪಡಿಸಲಾಗುತ್ತದೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತಿದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೇಬೇಳೆ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದೂ ಉಂಟು. ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ಹುಯ್ಯುವುದರ ಮೂಲಕ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸುವುದು ವಾಡಿಕೆ. ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮೊದಲಾದವನ್ನು ಉಪಯೋಗಿಸಿ "ದಿಢೀರ್ ದೋಸೆ" ಮೊದಲಾದವನ್ನೂ ಮಾಡಬಹುದು.

ಮನೆ

ಮನೆ ಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು, ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ಒಂದು ಮನೆಯಲ್ಲಿರುವ ಸಾಮಾಜಿಕ ಘಟಕವನ್ನು ಮನೆಜನ ಎಂದು ಕರೆಯಲಾಗುತ್ತದೆ. ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ. ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪು. ಸು. ...

ಸಸ್ಯಾಹಾರ

ಒಮೆಗಾ 3 ಫ್ಯಾಟಿ ಆಸಿಡ್‌ ; ಸ್ವಸ್ಥ ಹೃದಯ, ಮೆದುಳು, ಚರ್ಮ ಹಾಗೂ ಕೀಲಿಗೆ ಒಮೆಗಾ 3 ತುಂಬಾ ಅಗತ್ಯ. ಇದು ಅಗಸೆ ಬೀಜ, ಅಗಸೆ ಎಣ್ಣೆ, ಅಕ್ರೋಡ, ಗೋಣಿ ಸೊಪ್ಪಿನಲ್ಲಿ ಇರುತ್ತದೆ. ವಿಟಮಿನ್ ಡಿ: ವಿಟಮಿನ್‌ ಡಿ-೩ ಸೂರ್ಯನ ಬೆಳಕಿನಿಂದಲೇ ಪಡೆಯಬಹುದು. ಇದರೊಂದಿಗೆ ಕಿತ್ತಳೆ ಹಣ್ಣಿನ ರಸ, ಸೋಯಾ ಮಿಲ್ಕ್‌ನಲ್ಲಿ ಕೂಡ ಇತರೆ ವಿಟಮಿನ್ ಡಿ ಯ ಅಂಶಗಳಿವೆ ಆರೋಗ್ಯವಾಗರಲು ಸಸ್ಯಾಹಾರಿ ಆಹಾರ ಕ್ರಮ ಎಂದಿಗೂ ಸೂಕ್ತವಾದುದು. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ಮಧುಮೇಹಕ್ಕೆ, ಕ್ಯಾನ್ಸರ್‌‍ಗಳ ತಡೆಗೆ ಸರಳ. ಎಲ್ಲಕ್ಕೂ ಸಸ್ಯಾಹಾರಿ ಡಯೆಟ್‌ ಸಹಾಯವಾಗಬಲ್ಲದು.ಮನೆಯಲ್ಲೇ ಇರುವ ಕೆಲವೇ ಆಹಾರಗಳಿಂದ ನಮ್ಮ ಆರೋಗ್ಯವನ್ನು ಸಮತೋಲನವಾಗಿಟ್ಟುಕೊಳ್ಳಬಹುದು. 200ಎಂ.ಜಿಗಿಂತ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವು ಹೃದಯದ ತೊಂದರೆ ಹಾಗೂ ...

                                     

ಜೀವನ ತರಂಗ

ಜೀವನ ತರಂಗ, ಬಂಗಾರ ರಾಜು ನಿರ್ದೇಶನ ಮತ್ತು ಡಿ.ಆರ್.ನಾಯ್ಡು ನಿರ್ಮಾಪಣ ಮಾಡಿರುವ ೧೯೬೩ ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ವೆಂಕಟರಾಜು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಜೂನಿಯರ್ ರೇವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

                                     

ಜೀವನ ನಾಟಕ

ಜೀವನ ನಾಟಕ ಚಿತ್ರವು ೧೯೪೨ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಮಹಬ್ ಕಾಶ್ಮೀರಿರವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ವೀರಣ್ಣ ಕೆಂಪರಾಜ್ ನಾಯಕನ ಪಾತ್ರದಲ್ಲಿ ಮತ್ತು ಜಯಮ್ಮ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ರಾಮಯ್ಯರ್ ಮತ್ತು ಹಾರ್ಮೋನಿಯಂ ಶೇಷಗಿರಿರಾವ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.