ⓘ ಸಾಹಿತ್ಯ

ಅಸ್ಸಾಮಿ ಸಾಹಿತ್ಯ ಆಂಗ್ಲ ಸಾಹಿತ್ಯ ಉಪನ್ಯಾಸಕರು ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕವನ ಕವಿಗಳು ಕಾದಂಬರಿಗಳು ಕುವೆಂಪುರವರ ಕೃತಿಗಳು ಕೃತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ದ.ರಾ.ಬೇಂದ್ರೆಯವರ ಕೃತಿಗಳು ಧಾರ್ಮಿಕ ಗ್ರಂಥಗಳು ನವೋದಯ ಸಾಹಿತ್ಯ ನವ್ಯ ಸಾಹಿತ್ಯ ನಾಟಕ ಸಾಹಿತ್ಯ ಪುಸ್ತಕಗಳು ಮರಾಠಿ ಸಾಹಿತ್ಯ ಮಲಯಾಳಂ ಸಾಹಿತ್ಯ ಮಾಸ್ತಿಯವರ ಕೃತಿಗಳು ಯು ಆರ್ ಅನಂತಮೂರ್ತಿಯವರ ಕೃತಿಗಳು ರಷ್ಯನ್ ಸಾಹಿತ್ಯ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲೇಖಕರು ಶಿಶು ಸಾಹಿತ್ಯ ಸಂಸ್ಕೃತ ಸಾಹಿತ್ಯ ಸಾಹಿತ್ಯ ಪುರಸ್ಕಾರಗಳು ಸಾಹಿತ್ಯ ಪ್ರಕಾರಗಳು ಸಾಹಿತ್ಯ ಮಾದರಿಗಳು ಹಾಸ್ಯಸಾಹಿತ್ಯ

ಸಾಹಿತ್ಯ

ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆದಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ. == ನಾಟಕ ==ಸ್ಮಶಾನ ಕುರುಕ್ಷೇತ್ರ

ಕನ್ನಡ ಸಾಹಿತ್ಯ ಪರಿಷತ್ತು

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಡಾ. ಮನು ಬಳಿಗಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ

ಕೇಂದ್ರ ಸಾಹಿತ್ಯ ಅಕಾಡೆಮಿ ಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.

ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕನ್ನಡದ ಸಾಹಿತ್ಯ ಕೃತಿಗಳಿಗೆ ನೀಡಲಾಗುವ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಆಗಿದೆ. ಕನ್ನಡ ಸಾಹಿತ್ಯದ ಕವನ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ, ಪ್ರವಾಸ ಬರವಣಿಗೆ, ಅನುವಾದ, ಮಕ್ಕಳ ಬರವಣಿಗೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಪುಸ್ತಕಗಳಿಗೆ 1965ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ಕನ್ನಡ ಸಾಹಿತ್ಯ

ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು. ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯಕ ಸಂಪ್ರದಾಯ, ಸಂಸ್ಕೃತ ಸಾಹಿತ್ಯ.

                                     

ಅನ್ನಾ ಕರೆನೀನಾ

ಅನ್ನಾ ಕರೆನೀನಾ ೧೮೭೩ರಿಂದ ೧೮೭೭ರ ವರೆಗೆ ದ ರಷ್ಯನ್ ಮೆಸೆಂಜರ್ ನಿಯತಕಾಲಿಕದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾದ ರಷ್ಯಾದ ಲೇಖಕ ಲಿಯೊ ಟಾಲ್‍ಸ್ಟಾಯ್‌ಯವರ ಒಂದು ಕಾದಂಬರಿ. ಮೊದಲ ಕಂತಿನ ಸಮಯದಲ್ಲಿ ಹುಟ್ಟಿದ ವಿಷಯಗಳ ಸಂಬಂಧವಾಗಿ ಅದರ ಸಂಪಾದಕ ಮಿಖಯ್ಲ್ ಕೆಟ್ಕಾಬ್ ಮತ್ತು ಟಾಲ್‌ಸ್ಟಾಯ್‌ಯವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು; ಹಾಗಾಗಿ, ಕಾದಂಬರಿಯ ಮೊದಲ ಪ್ರಕಾಶನ ಪುಸ್ತಕ ರೂಪದಲ್ಲಿತ್ತು.ಇದು ಸರ್ವಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.

                                     

ಕನಕಮುಸುಕು

ಡಾ. ಕೆ.ಎನ್.ಗಣೇಶಯ್ಯರವರು ಬರೆದ ರೋಚಕ ಕಾದಂಬರಿಗಳಲ್ಲೊಂದು. ಮೌರ್ಯ ಚಂದ್ರಗುಪ್ತನು ತನ್ನ ಬದುಕಿನ ಕೊನೆಗಾಲವನ್ನು ಕರ್ನಾಟಕದ ಶ್ರವಣಬೆಳಗೊಳದಲ್ಲಿ ಕಳೆದನಷ್ಟೆ. ಹಾಗೆ ದಕ್ಷಿಣಕ್ಕೆ ಬಂದಾಗ ಜೈನಧರ್ಮದ ಪ್ರಸಾರಕ್ಕೆಂದು ಮುಸುಕಿನ ಜೋಳ ಅಥವಾ ಗೋವಿನ ಜೋಳದ ರೂಪದಲ್ಲಿ ಅಪಾರ ಪ್ರಮಾಣದ ಬಂಗಾರವನ್ನು ತಂದಿದ್ದು ಆ ಬಂಗಾರದ ಹುಡುಕಾಟದ ಕಥೆ ಇಲ್ಲಿದೆ.

                                     

ಚಿನುವ ಅಚಿಬೆ

ಚಿನುವ ಅಚಿಬೆ ನೈಜೀರಿಯ ದೇಶದ ಪ್ರಖ್ಯಾತ ಸಾಹಿತಿ. ಇವರು ಸಾಹಿತ್ಯದಲ್ಲಿ ಇಡೀ ಆಫ್ರಿಕ ಖಂಡವನ್ನೇ ಪ್ರತಿನಿಧಿಸುತ್ತಾರೆ. ಇವರ ಕೃತಿಗಳು ಮುಖ್ಯವಾಗಿ ಆಫ್ರಿಕ ದ ಜನಾಂಗಗಳ ಮೇಲೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಬೀರಿದ ಪರಿಣಾಮಗಳನ್ನು ವಿಶ್ಲೇಷಿಸುತ್ತವೆ. "ಥಿಂಗ್ಸ್ ಫಾಲ್ ಅಪಾರ್ಟ್"ಕೃತಿ ನೈಜೀರಿಯದ ಆದಿವಾಸಿ ಜನಾಂಗ ದ ಜೀವನ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಛಿದ್ರವಾಗುವ ಪರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. "ಆರೋ ಆಫ್ ಗಾಡ್", "ನೋ ಲಾಂಗರ್ ಅಟ್ ಈಸ್", "ಎ ಮಾನ್ ಆಫ್ ದಿ ಪೀಪಲ್" ಮುಂತಾದವುಗಳು ಇವರ ಮುಖ್ಯ ಕೃತಿಗಳು.

                                     

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

                                     

ತಿಮ್ಮ (ಬೀಚಿ ಕಥಾನಾಯಕ)

ತಿಂಮ ಅಥವಾ ತಿಮ್ಮ ಬೀಚಿಯವರ ಬಹುತೇಕ ಬರಹಗಳಲ್ಲಿ ಕಾಣಿಸಿಕೊಳ್ಳುವ ಪಾತ್ರ. ವಿಶಿಷ್ಟ ನಡೆ-ನುಡಿ, ಮೊನಚುಮಾತು ಮತ್ತು ಮಾನವೀಯ ಅಂತಃಕರಣ ಇವೇ ಮೊದಲಾದ ಗುಣಗಳನ್ನು ಬೀಚಿಯವರು ತಿಂಮನ ಪಾತ್ರದ ಮೂಲಕ ಬಿಡಿಸಿಟ್ಟಿದ್ದಾರೆ.

                                     

ಪಂಪ ಪ್ರಶಸ್ತಿ

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

                                     

ರನ್ನ ಹಳಗನ್ನಡ-ಪ್ರಶಸ್ತಿ-2014

ಮುಧೋಳ ರನ್ನ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ರನ್ನ ಹಳಗನ್ನಡ’ ಪ್ರಶಸ್ತಿಯನ್ನು ನಾಡಿನ ಹಿರಿಯ ಕನ್ನಡ ವಿದ್ವಾಂಸ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ಪ್ರದಾನ ಮಾಡಲಾಯಿತು. ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಶನಿವಾರ 14/02/2015 ರ್ಂದು ಆರಂಭಗೊಂಡ ಮೂರು ದಿನಗಳ ‘ರನ್ನ ವೈಭವ’ ಸಾಂಸ್ಕೃತಿಕ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 1ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

                                     

ಸಾಹಿತ್ಯದ ವಿಧ

Genres of film at the Internet Movie Database Museum of Broadcast Communications Rhetorica Genre Helping Children Understand Literary Genres Dictionary.com