ⓘ ಪುಸ್ತಕ ಸಂಸ್ಕೃತಿ

                                     

ⓘ ಪುಸ್ತಕ ಸಂಸ್ಕೃತಿ

thumb|Book Culture

ಸರಸ್ವತಿಯನ್ನು ಪುಸ್ತಕ ವಾಣಿ ಎಂದು ಕವಿಗಳು ವರ್ಣಿಸಿದ್ದಾರೆ. ಪುಸ್ತಕಂ ಹಸ್ತ ಭೂಷಣಂ ಎಂದರೆ ಪುಸ್ತಕ ವಿದ್ಯಾರ್ಥಿಗಳ ಹಸ್ತ ಭೂಷಣ ಎಂದರು ಸುಭಾಷಿತಕಾರರು. ಒಂದು ಒಳ್ಳೆಯ ಪುಸ್ತಕವೆಂದರೆ ಜನಾಂಗದಿಂದ ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇಧಾವಿಯ ಜೀವನ ಸರ್ವಸ್ವ ಎಂದ ಮಿಲ್ಟನ್ -ಇಂಗ್ಲಿಷ್ನ ಒಂದು ಸೂಕ್ತಿಯಲ್ಲಿ. ಅಂದರೆ, ಉಡುಗೆ ತೊಡುಗೆಗಳಿಗೆ ಅಷ್ಟಾಗಿ ಗಮನ ಕೊಡದಿದ್ದರೂ ಚಿಂತೆಯಿಲ್ಲ. ಪುಸ್ತಕಗಳನ್ನು ಕೊಳ್ಳಬೇಕು, ಓದಬೇಕು, ಜ್ಞಾನದ ದಿಗಂತವನ್ನು ವಿಸ್ಥತಿಸಿಕೊಲ್ಲಬೇಕು ಎಂದು ಈ ಸೂಕ್ತಿ ಹೇಳುತ್ತದೆ. ಹಿಂದೆ ಸಂಸ್ಕ್ರತಿವಂತರ ಮನೆಯಲ್ಲಿ ಚಿಕ್ಕದೊಂದು ಗ್ರಂಥಭಂದಾರವೇ ಇರುತಿತ್ತು. ಗ್ರಂಥದಾನ ಮಹಾ ಪುಣ್ಯಕರವಾದ ಕೆಲಸವೆಂದು ಭಾವಿಸಿದ್ದಾರೆ. ಕನ್ನಡನಾಡಿನ ಸ್ತ್ರೀ ರತ್ಹ್ನವಾದ ದಾನ ಚಿಂತಾಮಣಿ ಅತ್ತಿಮಬ್ಬೆ ಪೊನ್ನ ಮಹಾಕವಿಯ ಶಾಂತಿ ಪುರಾಣವನ್ನು ಒಂದು ಪ್ರತಿ ಮಾಡಿಸಿ, ಗ್ರಂಥದಾನ ಮಾಡಿ ಖ್ಯಾತಳಾದ ವಿಷಯ ಕನ್ನಡನಾಡಿನ ಹೆಮ್ಮೆಯ ಸಂಗತಿ. ಪುಸ್ತಕಗಳ ಬಗೆಗೆ ನಮ್ಮ ತಾತ್ಸಾರ, ನಮ್ಮ ರಾಷ್ಟ್ರೀಯ ದೌರ್ಬಲ್ಯ.ಶ್ರೀಮಂತರು ಹೃದಯ ಶ್ರೀಮಂತರೆಂದು ತೋರಿಸಲು ನಾಗರಿಕರು ಸಂಸ್ಕ್ರತಿಹೀನರಲ್ಲ ಎಂದು ಸಮರ್ಥಿಸಲು ವಿದ್ಯಾವಂತರು ಕೇವಲ ಅಕ್ಷರಸ್ಥರಲ್ಲ ಎಂಬುದನ್ನು ರುಜುವಾತು ಪಡಿಸಲು ಒಳ್ಳೆಯ ಪುಸ್ತಕಗಳು ತಮ್ಮ ಮನೆಯ ಸಂಪತ್ತು ಎಂಬ ಭಾವನೆ ಬೆಳೆದು ನಾಡಿನಾದ್ಯಂತ ಪುಸ್ತಕ ಸಂಸ್ಕ್ರತಿ ವ್ಯಾಪಿಸಬೇಕು.