ⓘ ಇಂಗ್ಲಿಷ್ ಕಡಲ್ಗಾಲುವೆ

                                     

ⓘ ಇಂಗ್ಲಿಷ್ ಕಡಲ್ಗಾಲುವೆ

ಇಂಗ್ಲಿಷ್ ಕಡಲ್ಗಾಲುವೆ: ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಹಬ್ಬಿ ಎರಡು ದೇಶಗಳನ್ನೂ ಬೇರ್ಪಡಿಸುತ್ತ, ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಸಮುದ್ರಗಳನ್ನು ಸೇರಿಸುತ್ತ ಯುರೋಪಿನ ಮೇಲುಭಾಗದ ನೌಕಾಯಾನಕ್ಕೆ ಅತ್ಯುಪಯುಕ್ತವಾಗಿರುವ ಕಡಲ್ಗಾಲುವೆ.

ಆದಿಭೂಯುಗದ ಪ್ರಿಕೇಂಬ್ರಿಯನ್ ಕಾಲದಲ್ಲಿ ಇಂಗ್ಲೆಂಡ್ ಮತ್ತು ಯುರೋಪ್ ಖಂಡಗಳಿಗೆ ಭೂಸಂಬಂಧವಿತ್ತೆಂದೂ ಆದರೆ ಪ್ಲೀಸ್ಟೊಸೀನ್ ಅಥವಾ ಮೂರನೆಯ ಭೂಯುಗದ ಮುಂದಿನ ಕಾಲದಲ್ಲಿ ಭೂಸವೆತದ ಪರಿಣಾಮವಾಗಿ ಕಾಲುವೆ ನಿರ್ಮಿತವಾಯಿತೆಂದೂ ತಿಳಿದುಬಂದಿದೆ. ಇಂದಿಗೂ ಈ ಕಾಲುವೆಯ ತೀರ ಪ್ರದೇಶಗಳಲ್ಲಿ ಭೂಸವೆತವಾಗುತ್ತಿದೆ.

                                     

1. ಭೌಗೋಳಿಕ ಮಾಹಿತಿ

ಸು. 562ಕಿಮೀ. ಉದ್ದವಾಗಿದ್ದು 25-160ಕಿಮೀ ಅಗಲವಿದೆ. ಇದರ ಅತ್ಯಂತ ಕಿರಿದಾದ ಭಾಗ ಇಂಗ್ಲೆಂಡಿನ ಡೋವರ್ನಿಂದ ಫ್ರಾನ್ಸ್ ದೇಶದ ಗ್ರಿಸ್ ನೆಜ್ ಭೂಶಿರದವರೆಗಿನದು. ಬಹುಭಾಗ 46ಮೀ. ಗಳಿಗಿಂತ ಹೆಚ್ಚು ಆಳವಿದೆ. ಅತ್ಯಂತ ಆಳವಾದ ಭಾಗ 175 ಮೀ ಆಳವಿರುವ ಹರ್ಡ್ಸ್ ಎಂಬ ಕೂಪ. ಕಡಲ್ಗಾಲುವೆ ಚಾನಲ್ ದ್ವೀಪಗಳ ವಾಯವ್ಯಕ್ಕಿದೆ. ಇಂಗ್ಲಿಷ್ ಕಡಲ್ಗಾಲುವೆಗೆ ಫ್ರಾನ್ಸ್ ದೇಶದ ಸುಮಾರು 106.190 ಚ.ಕಿಮೀ ಜಲಾನಯನ ಪ್ರದೇಶ ಮತ್ತು ಇಂಗ್ಲೆಂಡಿನ ಸು. 20.720 ಚ.ಕಿಮೀ. ಜಲಾನಯನ ಪ್ರದೇಶಗಳು ಅನೇಕ ನದಿಗಳ ಮೂಲಕ ನೀರಿನ್ನೊದಗಿಸುತ್ತವೆ. ಆದ್ದರಿಂದ ಈ ಕಡಲ್ಗಾಲುವೆಯ ನೀರಿನ ಲವಣಾಂಶ 34.8%; ಅಟ್ಲಾಂಟಿಕ್ ಸಾಗರದ ನೀರಿನ ಲವಣಾಂಶಕ್ಕಿಂತ 35.4% ಕಡಿಮೆ. ಈ ಕಡಲ್ಗಾಲುವೆಗೆ ಸೇರುವ ಮುಖ್ಯ ನದಿಗಳು ಸೀನ್, ಟಮರ್, ಸ್ಟೂರ್, ಟೆಸ್್ಟ, ಅರುಣ್. ಈ ಭಾಗದ ಮೇಲೆ ಪಶ್ಚಿಮಮಾರುತಗಳು ಬೀಸುತ್ತವೆ. ಆಗಾಗ್ಗೆ ಇಲ್ಲಿ ವಾಯುಭಾರದಲ್ಲಿ ಇಳಿತಗಳುಂಟಾಗುವುದರಿಂದ ಮಳೆ ಕಡಿಮೆ. ಹವಾಮಾನ ಹಿತಕರವಲ್ಲ. ಇಲ್ಲಿ ಹೆಚ್ಚಾಗಿ ಮಂಜು ಸುರಿಯುವುದು. ಬೇಸಿಗೆಯಲ್ಲಿ ಉಷ್ಣಾಂಶ 60°. ಫ್ಯಾ 15.5°ಸೆಂ ಚಳಿಗಾಲದಲ್ಲಿ 45° ಫ್ಯಾ 7.2°ಸೆಂ.

ಈ ಕಾಲುವೆಯಲ್ಲಿ ವೈಟ್ ಮತ್ತು ಚಾನಲ್ ದ್ವೀಪಗಳಿವೆ. ಇಲ್ಲಿ ಅನೇಕ ಹಡಗುಗಳೂ ದೋಣಿಗಳೂ ಸಂಚರಿಸುವುದರಿಂದ ಹಡಗುಗಳಿಗೆ ದಾರಿ ತೋರಿಸಲು ಎತ್ತರವಾಗಿ ಕಟ್ಟಿರುವ ಅನೇಕ ದೀಪದ ಮನೆಗಳಿವೆ. ಇದರ ಎರಡೂ ಪಕ್ಕದಲ್ಲಿ ಅನೇಕ ಬಂದರುಗಳಿವೆ. ಇಂಗ್ಲೆಂಡ್ ದೇಶದ ಕಡೆ ಪ್ಲಿಮತ್, ಸೌತಾಂಪ್ಟನ್, ಪೋರ್ಟ್ಸ್ಮತ್, ಡೋವರ್, ಫ್ರಾನ್ಸ್ ದೇಶದ ಕಡೆ ಜೆರ್ ಭೂರ್ಗ್, ಲೀಹಾರ್ಟ್, ಕೆಲೆಗಳಿವೆ. ಹೆಚ್ಚಾಗಿ ಮೀನು ದೊರೆಯುವುದರಿಂದ ಇಡೀ ಕಾಲುವೆ ಮೀನುಗಾರಿಕೆಯ ಕೇಂದ್ರವಾಗಿದೆ.

ಈ ನಾಲೆಯ ತಳದಲ್ಲೊಂದು ಸುರಂಗ ಇಂಗ್ಲಿಷ್ ಕಡಲ್ಗಾಲುವೆಯ ಸುರಂಗ ತೋಡಿ ಪ್ಯಾರಿಸ್ ಮತ್ತು ಲಂಡನ್ ಎರಡು ಕಡೆಗೂ ಭೂಸಂಪರ್ಕವನ್ನು ಏರ್ಪಡಿಸುವ ಸಾಹಸ ಬಹಳ ವರ್ಷಗಳ ಕಾಲ ನಡೆದು 1994ರಲ್ಲಿ ಪೂರ್ಣಗೊಂಡಿತು.

                                     

2. ಕಡಲ್ಗಾಲುವೆಯ ದಾಟುವಿಕೆ

ವಾಯುಬುರುಡೆಯ ಬೆಲೂನ್ ಸಹಾಯದಿಂದ 1785ರಲ್ಲೂ ವಿಮಾನವನ್ನುಪಯೋಗಿಸಿ 1909ರಲ್ಲೂ ಈ ಕಡಲ್ಗಾಲುವೆಯನ್ನು ದಾಟುವ ಪ್ರಯುತ್ನ ಮೊಟ್ಟಮೊದಲಿಗೆ ನಡೆಯಿತು. ಮ್ಯಾಥ್ಯೂ ವೆಬ್ ಎಂಬುವನು 1875ರಲ್ಲಿ ಈ ಕಡಲ್ಗಾಲುವೆಯನ್ನು ಯಶಸ್ವಿಯಾಗಿ ಈಜಿಕೊಂಡು ದಾಟಿದ. 1926ರಲ್ಲಿ ಸಂಯುಕ್ತ ರಾಷ್ಟ್ರದ ಗರ್ಟ್ರಿಥ್ ಎಡೆಕಿಲ್ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಪ್ರಥಮ ಮಹಿಳೆ. 1978ರಲ್ಲಿ ಅಮೆರಿಕದ ಪೆನ್ನಿಲಿ, ಡಿನ್ ಇಂಗ್ಲೆಂಡಿನಿಂದ ಫ್ರಾನ್್ಸಗೆ ಈಜಿ ದಾಖಲೆ ನಿರ್ಮಿಸಿದರು. 1994ರಲ್ಲಿ ಅಮೆರಿಕದ ಚಡ್ ಹಂಡ್ ಬೈ 7 ಗಂಟೆ, 17 ನಿಮಿಷಗಳಲ್ಲಿ ಈಜಿ ವಿಶ್ವ ದಾಖಲೆ ಮಾಡಿದ.