ⓘ ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ

                                     

ⓘ ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ

ಶ್ರೀ ನಾಗೇಶ್ವರ ಜ್ಯೋತಿರ್ಲಿಂಗವು ನಾಗೇಶ್ವರ ಎಂಬ ಊರಿನಲ್ಲಿದೆ. ಇದು ಗುಜರಾತ್ ರಾಜ್ಯದ ಜಮನಗರ ಜಿಲ್ಲೆಯಲ್ಲಿ ದ್ವಾರಕಾ ನಗರದ ಹತ್ತಿರವಿದೆ. ಆದರೆ ಇದೇ ಹೆಸರಿನ ಜ್ಯೋತಿರ್ಲಿಂಗವೆಂದು ಹೇಳುವ ಇನ್ನೆರಡು ಸ್ಥಳಗಳಿವೆ. ಉತ್ತರಾಖಂಡದ ಆಲಮೋರಾ ಹತ್ತಿರ ಜಾಗೇಶ್ವರ ಎಂದು ಕರೆಯಲ್ಪಡುವ ಒಂದು ಮತ್ತು ಮಹಾರಾಷ್ತ್ರದ ಅವುನ್ಧ ದಲ್ಲಿರುವ ನಾಗನಾಥ ದೇವಾಲಯ. ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ದೇವಾಲಯವು ದ್ವಾರಕಾನಗರಕ್ಕೆ ಬಹಳ ಹತ್ತಿರವಿದೆ. ಅಲ್ಲಿಗೆ ಹೋಗಲು ಬೇಕಾದಷ್ಟು ವಾಹನ ಸೌಕರ್ಯವಿದೆ.

                                     

1. ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ಮಂದಿರ

ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ಮಂದಿರವು ನೋಡಲು ತುಂಬಾ ಸುಂದರವಾಗಿದೆ. ವಿವಿಧ ರೀತಿಯ ಕೆತ್ತನೆಯಿಂದ ಕೂಡಿದ್ದು ಕಲಾಪೂರ್ಣ ವಾಗಿದೆ. ಹಾಗೂ ವಿಶಾಲವಾಗಿದೆ. ಪೂಜಾಸಾಮಗ್ರಿಗಳು ದೇವಾಲಯದ ಬಳಿಯೇ ದೊರೆಯುತ್ತವೆ. ಅಭಿಶೇಕಕ್ಕೆ ಹಾಲಿನಗಿಂಡಿಗಳು ದೊರಕುತ್ತವೆ. ಅರ್ಚಕರೇ ಪೂಜೆಮಾಡಿ ಕೊಡುತ್ತಾರೆ. ಶ್ರೀ ನಾಗೇಶ್ವರ ಜ್ಯೋತಿರ್ಲಿಂಗದ ಪೂಜೆ ಮುಗಿಸಿ ಹತ್ತಿರ ಇರುವ ಪಾರ್ವತಿ ಮಂದಿರಕ್ಕೆ ಹೋಗಬೇಕು. ಇಲ್ಲಿ ಪಾರ್ವತಿಗೆ ನಾಗೇಶ್ವರಿ ಎಂದು ಕರೆಯುತ್ತಾರೆ. ಶ್ರಾವಣಮಾಸದಲ್ಲಿ ಹಾಗೂ ಹುಣ್ಣಿಮೆಯಂದು ವಿಶೇಷ ಪೂಜೆ ಇರುತ್ತದೆ. ಶಿವರಾತ್ರಿಯಂದು ಜಾತ್ರೆ ನಡೆಯುತ್ತದೆ. ಈ ಶ್ರೀ ನಾಗೇಶ್ವರ ಜ್ಯೋತಿರ್ಲಿಂಗದ ದರ್ಶನದಿಂದ ಎಲ್ಲಾ ಅಭೀಷ್ಟಗಳೂ ಪೂರ್ಣಗೊಳ್ಳುತ್ತವೆ ಎಂದು ಭಕ್ತರು ನಂಬಿದ್ದಾರೆ. ಅಯೋದ್ಯೆಯ ಹತ್ತಿರವಿರುವ ಜಾಗೇಶ್ವರದಲ್ಲಿ ನಾಗೇಶ್ವರ ಜ್ಯೋತಿರ್ಲಿಂಗವಿದೆ. ಅದೂ ದೊಡ್ಡ ದೇವಾಲಯ. ಇಲ್ಲಿಯೂ ಭಕ್ತರ ಆಗಮನ ಹೆಚ್ಚಿನ ಸಂಖ್ಯೆಯಲ್ಲಿರುವುದು.ಮಂದಿರದಲ್ಲಿ ಶಿವಲಿಂಗ ದಕ್ಷಿಣಮುಖವಾಗಿದೆ.ಗೋಪುರ ಮಾತ್ರ ಪೂರ್ವದಿಕ್ಕಾಗಿದೆ.

                                     

2. ಸ್ಥಳ ಪುರಾಣ

ವಿಕಿಪೀಡಿಯಾದಿಂದ:

 • ಇದೂ ಕೂಡ ಓಂಕಾರೇಶ್ವರ ಮತ್ತು ಸೋಮನಾಥ ದೇವಾಲಯದ ಶಿವಪುರಾಣದ ಕಥೆಯಂತೆಯೇ ಸ್ಥಳ ಪುರಾಣ ಇದೆ. ಬ್ರಹ್ಮ ಮತ್ತು ವಿಷ್ಣು ಇವರಲ್ಲಿಯರು ಮೇಲೆಂದು ಚರ್ಚೆಯಾದಾಗ ಅವರು ಯಾರು ಮೇಲೆಂದು ಶಿವನನ್ನು ಕೇಳುವರು. ಶಿವನು ಮೂರು ಜ್ಯೋತಿಗಳ ಬೆಳಕಿನ ಕಂಬಗಳನ್ನು ಸೃಷ್ಠಿಸಿದನು ಜ್ಯೋತಿರ್ಲಿಲಿಂಗ. ವಿಷ್ಣು ಮತ್ತು ಬ್ರಹ್ಮ ರಿಗೆ ಅದರ ಮೇಲಿನ ಮತ್ತು ಕೆಳಗಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ ಮೇಲಿನ ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮ ನು ತಾನುನೋಡಿರುವದಾಗಿ ಹೇಳಿದನು. ಈಶ್ವರನು ಎರಡನೇ ಜ್ಯೋತಿಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆ ಯಿಲ್ಲದಿರಲಿ ಎಂದು ಶಪಿಸಿದನು.ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆ ಗೆ ಅರ್ಹನೆಂದು ಹೇಳಿದನು ಆ ಜ್ಯೋತಿಯೇ ಈ ಜ್ಯೋತಿರ್ ಲಿಂಗವಾಗಿದೆ ಎಂದು ಶಿವ ಪುರಾಣ ಹೇಳುತ್ತದೆ.
                                     

3. ಶ್ರೀ ನಾಗೇಶ್ವರ ಲಿಂಗ

ಶಿವ ಪುರಾಣದ ಇನ್ನೊಂದು ಕಥೆಯಂತೆ ಇಲ್ಲಿ ದಾರುಕಾವನವಿತ್ತು. ಚಿಕ್ಕ ಶರೀರದವರಾದ ವಾಲಿಖಿಲ್ಯ ಮುನಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಒಮ್ಮೆ ಶಿವನು ಸರ್ಪಗಳನ್ನು ಧರಿಸಿ ದಿಗಂಬರನಾಗಿ ಆ ವನದಲ್ಲಿ ಸಂಚರಿಸಿದನು. ಅವನನ್ನು ನೋಡಿದ ಮುನಿಪತ್ನಿಯರು ಮೋಹಗೊಂಡು ಅವನಹಿಂದೆಯೇಹೋದರು.ಇದರಿಂದ ಕೋಪಗೊಂಡ ಮುನಿಗಳು ಶಿವನಿಗೆ ಅವನ ಲಿಂಗ ಉದುರಿ ಹೋಗಲಿ ಎಂದು ಶಾಪವಿತ್ತರು. ಹಾಗೆ ಆದಾಗ, ಜಗತ್ತೇ ನಡುಗಿ ಹೋಯಿತು. ಬ್ರಹ್ಮ ಮತ್ತು ವಿಷ್ಣು ಬಂದು ಶಿವನನ್ನು ಜಗತ್ತನ್ನು ಉಳಿಸಲು ಕೋರಿದರು. ಶಿವನು ಪುನಹ ಆ ಲಿಂಗವನ್ನು ಧರಿಸಿದನು. ನಾಗ ಧರನಾಗಿ ಬಂದ ಶಿವನು ನಾಗೇಶ್ವರನಾಗಿಯೂ ಪಾವತಿಯು ನಾಗೇಶ್ವರಿಯಾಗಿಯೂ ಅಲ್ಲಿ ನೆಲೆಸಿದರು.

 • ಶಿವ ಪುರಾಣದ ಮತ್ತೊಂದು ಕಥೆಯಂತೆ ಶಿವ ಭಕ್ತಳಾದ ಸುಪ್ರಿಯಾಳನ್ನು, ದಾರಕಾ ವನದ ರಾಜನಾದ ಶಿವ ಭಕ್ತನೂ ಆದ ದಾರುಕನೆಂಬ ನಾಗ ರಾಕ್ಷಸನು ಅನ್ಯ ಸ್ತ್ರೀಯರ ಜೊತೆ ಬಂಧಿಸಿಟ್ಟನು. ಆ ಸ್ತ್ರೀಯರೆಲ್ಲರೂ ಸುಪ್ರಿಯಾಳ ಆದೇಶದಂತೆ ಶಿವ ಮಂತ್ರವನ್ನು ಭಕ್ತಿಯಿಂದ ಜಪಿಸಿದರು. ಶಿವನು ಪ್ರತ್ಯಕ್ಷನಾಗಿ ದಾರುಕನನ್ನು ವಧಿಸಿ ಅವರನ್ನು ಬಿಡುಗಡೆಗೊಳಿಸಿ ಅಲ್ಲಿಯೇ ಜ್ಯೋತಿರ್ಲಿಂಗ ರೂಪದಲ್ಲಿ ನೆಲಸಿದನು.

ರಾಕ್ಷಸ ದಾರುಕನ ಪತ್ನಿ ದಾರುಕಾಳು ಪಾರ್ವತಿಯನ್ನು ಕುರಿತು ತಪಸ್ಸುಮಾಡಿ ಅವಳಿಂದ ವರ ಪಡೆದು ದಾರುಕವನದ ರಾಣಿಯಾದಳು. ಅವಳು ತನ್ನ ತಪ:ಶಕ್ತಿ ಯಿಂದ ದಾರಕ ವನವನ್ನು ಸಮುದ್ರದಲ್ಲಿ ಇರಿಸಿಕೊಂಡು ತನ್ನ ಅನುಚರರಾದ ರಾಕ್ಷಸರ ಮೂಲಕ ತಪಸ್ವಿಗಳನ್ನು ಅಪಹರಿಸಿ ಬಂಧಿಸಿಡುತ್ತಿದ್ದಳು. ಒಮ್ಮೆ ಶಿವ ಭಕ್ತೆ ಸುಪ್ರಿಯಾಳನ್ನು ಅಪಹರಿಸಿ ಅವರೊಡನೆ ಇವಳನ್ನೂ ಕೂಡಿಹಾಕಿದಳು. ಸುಪ್ರಿಯಾಳು ಎಲ್ಲರೊಡನೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿದಳು. ದಾನವರು ಸುಪ್ರಿಯಾಳನ್ನು ವಧಿಸಲು ಮುಂದಾದರು.ಆಗ ಶಿವನು ಪ್ರತ್ಯಕ್ಷನಾಗಿ ಅವಳನ್ನು ಕಾಪಾಡಿದನು ದಾನವರು ತಮ್ಮ ತಪ್ಪನ್ನು ಅರಿತುಕೊಂಡರು. ಶಿವನು ನಂತರ ನಾಗೇಶ್ವರನಾಗಿ ಜ್ಯೋತಿರ್ಲಿಂಗರೂಪದಲ್ಲಿ ಅಲ್ಲಿಯೆ ನೆಲಸಿದನು. ಪಾರ್ವತಿಯೂ ನಾಗೇಶ್ವರಿಯಾಗಿ ಅಲ್ಲಿ ನೆಲಸಿದಳು.                                     

4. ಸ್ಥಳ ವಿವಾದ ;

ದಾರುಕಾ ವನವು ಉತ್ತರಾಖಂಡನ ಆಲಮೋರಾದಲ್ಲಿರುವ ಜಾಗೇಶ್ವರವೇ ಅಲ್ಲಿಯ ನಾಗೇಶ್ವರ ದೇವಾಲಯ ಎಂದು ಅವರು, ಮಹಾರಾಷ್ಟ್ರದ ಅವುನ್ಧ ದಲ್ಲಿರುವ ನಾಗನಾಥ ದೇವಾಲಯವೇ ಜ್ಯೋತಿರ್ಲಿಂಗ ದೇವಾಲಯವೆಂದೂ ಆಯಾ ಪ್ರಾಂತದವರು ಹೇಳುತ್ತಾರೆ. ದ್ವಾರಕಾವನವು ತಪ್ಪಾಗಿ ದಾರುಕಾವನವೆಂದು ಭಾವಿಸಲಾಯಿತೇ ಎಂಬ ಅನುಮಾನವಿದೆ. ದಾರುಕ ಮರಗಳು ದೇವದಾರು ಮರಗಳು ಹಿಮಾಲಯದ ಪಶ್ಚಿಮದಲ್ಲಿ ಮಾತ್ರ ಕಂಡುಬರುವುದೆಂದೂ ಇವುಗಳಿಗೆ ದಾರಕಾವನವೆಂದು ಹೇಗೆ ಹೆಸರು ಬಂದಿತೆಂಬುದು ಬಗೆಹರಿಯದ ಸಮಸ್ಯೆಯಾಗಿದೆ. ಮೊದಲು ಅರವತ್ನಾಲ್ಕು ಜ್ಯೋತಿರ್ಲಿಂಗಗಳಿದ್ದು ಅವುಗಳಲ್ಲಿ ಹನ್ನೆರಡು ಮಾತ್ರ ಪ್ರಸಿದ್ಡಿಹೊಂದಿ ಉಳಿದುಕೊಂಡಿವೆ ಎಂದು ಹೇಳುತ್ತಾರೆ

                                     

5. ಆಧಾರ

 • ೧ ಇಂಗ್ಲಿಷ್ ವಿಕಿಪೀಡಿಯಾ: ನಾಗೇಶ್ವರ ಜ್ಯೋತಿರ್ಲಿಂಗ *

೨.ದ್ವಾದಶ ಜ್ಯೋತಿರ್ಲಿಂಗಗಳು ಕೈ ಹೊತ್ತಿಗೆ- ಪ್ರವಾಸ ಲೇಖನ ಗ್ರಂಥ_ ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ

                                     

6. ನೋಡಿ

 • ೩. ಶ್ರೀ ವೈದ್ಯನಾಥ ಜ್ಯೋತಿರ್ಲಿಂಗ |
 • ೫. ಶ್ರೀ ಸೋಮನಾಥ ಜ್ಯೋತಿರ್ಲಿಂಗ
 • ೬ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ
 • ೭ತ್ರ್ಯಂಬಕೇಶ್ವರ | ಶ್ರೀ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ
 • ೬.ಜ್ಯೋತಿರ್ಲಿಂಗ
 • ೨.ದ್ವಾದಶ ಜ್ಯೋತಿರ್ಲಿಂಗಗಳು
 • ೪. ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ
 • ೧. ಶ್ರೀ ವಿಶ್ವೇಶ್ವರ ಜ್ಯೋತಿರ್ಲಿಂಗ