ⓘ ಮಂಟಪ

                                     

ⓘ ಮಂಟಪ

ಭಾರತ ಮತ್ತು ನೆರೆಯ ದೇಶಗಳಲ್ಲಿ, ಮಂಟಪ ವು ನಿರ್ಮಿಸಿದ ಒಂದು ತಾತ್ಕಾಲಿಕ ಅಥವಾ ಶಾಶ್ವತ ರಚನೆ. ಇದನ್ನು ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ, ಉದಾಹರಣೆಗೆ ಕಟ್ಟಡದ ಹೊರಗೆ ಅಥವಾ ಒಂದು ತೆರೆದ ಪ್ರದೇಶದಲ್ಲಿ, ಧಾರ್ಮಿಕ ಅಥವಾ ಜನರನ್ನು ಒಟ್ಟಾಗಿ ಸೇರಿಸುವ ಇತರ ಸಮಾರಂಭಗಳಲ್ಲಿ, ಉದಾಹರಣೆಗೆ ಮದುವೆ, ಜಾತ್ರೆ, ವಸ್ತುಪ್ರದರ್ಶನ ಅಥವಾ ಹಬ್ಬ.

                                     

1. ಹಿಂದೂ ಧರ್ಮದಲ್ಲಿ

ಹಿಂದೂ ಧರ್ಮದಲ್ಲಿ, ಪಂಡಾಲ್ ಎಂದರೆ ಸಾಮಾನ್ಯವಾಗಿ ದೇವ ದೇವಿಯರನ್ನು ಪೂಜಿಸಲು ರಚಿಸಲಾದ ಒಂದು ತಾತ್ಕಾಲಿಕ ರಚನೆ, ಉದಾಹರಣೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನನ್ನು, ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಕೃಷ್ಣನನ್ನು ಅಥವಾ ದುರ್ಗಾ ಪೂಜಾದ ಸಂದರ್ಭದಲ್ಲಿ ದುರ್ಗೆಯನ್ನು ಇದನ್ನು ಪೂಜಾ ಪಂಡಾಲ್ ಎಂದು ಕರೆಯಲಾಗುತ್ತದೆ. ಪಂಡಾಲ್ ಅಥವಾ ಮಂಟಪಗಳನ್ನು ಧಾರ್ಮಿಕೇತರ ಚಟುವಟಿಕೆಗಳಿಗಾಗಿಯೂ ಬಳಸಲಾಗುತ್ತದೆ.