ⓘ ಪತಿವ್ರತೆ

                                     

ⓘ ಪತಿವ್ರತೆ

ಪತಿವ್ರತೆ ಕುಲವಧು ಪದವು ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ತನ್ನ ಪತಿಗೆ ನಿಷ್ಠಾವಂತ ಹಾಗೂ ಪ್ರಾಮಾಣಿಕಳಾದ ವಿವಾಹಿತ ಮಹಿಳೆಯನ್ನು ಸೂಚಿಸಲು ಬಳಸಲಾಗುವ ಪದವಾಗಿದೆ. ಪತಿವ್ರತೆ ಪದದ ಅರ್ಥ ಅಕ್ಷರಶಃ ತನ್ನ ಪತಿಗೆ ತನ್ನ ಭಕ್ತಿ ಮತ್ತು ರಕ್ಷಣೆಯ ವ್ರತ ಮಾಡಿದವಳು ಎಂದು. ಹೆಂಡತಿಯು ತನ್ನನ್ನು ತನ್ನ ಪತಿಗೆ ಅರ್ಪಿಸಿಕೊಂಡರೆ ಮತ್ತು ಅವನನ್ನು ರಕ್ಷಿಸಿದರೆ, ಅವನು ಏಳಿಗೆಯಾಗಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾನೆ ಎಂಬುದು ನಂಬಿಕೆಯಾಗಿದೆ. ಇಲ್ಲವಾದರೆ, ದುರಾದೃಷ್ಟ ಮತ್ತು ಮರಣವಾಗಬಹುದು. ಪತಿವ್ರತೆಯು ತನ್ನ ಪತಿಯನ್ನು ಎರಡು ರೀತಿಗಳಲ್ಲಿ ರಕ್ಷಿಸುತ್ತಾಳೆ. ಮೊದಲನೆಯದಾಗಿ, ಅವಳು ಅವನ ವೈಯಕ್ತಿಕ ಅಗತ್ಯಗಳನ್ನು ನೋಡಿಕೊಳ್ಳುತ್ತಾಳೆ ಮತ್ತು ಅವನು ತನ್ನ ಕರ್ತವ್ಯವನ್ನು ಧರ್ಮ ಮಾಡುವಂತೆ ಪ್ರೋತ್ಸಾಹಿಸುತ್ತಾಳೆ. ಎರಡನೆಯದಾಗಿ, ದೇವತೆಗಳು ಹಾನಿಯಿಂದ ತನ್ನ ಪತಿಯನ್ನು ರಕ್ಷಿಸುವರು ಮತ್ತು ಅವನಿಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವರು ಎಂಬ ಭರವಸೆಯಿಂದ, ದೇವತೆಗಳನ್ನು ಸಂತೋಷಗೊಳಿಸಲು ಅವಳು ವಿವಿಧ ಕ್ರಿಯಾವಿಧಿಗಳು ಮತ್ತು ಉಪವಾಸಗಳನ್ನು ಕೈಗೊಳ್ಳುತ್ತಾಳೆ.