ⓘ ಮಾಯಕೊಂಡ

                                     

ⓘ ಮಾಯಕೊಂಡ

ದಾವಣಗೆರೆ ಆಗ್ನೇಯದಲ್ಲಿ 23 ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರೈಲು ಮಾರ್ಗದಲ್ಲಿದೆ. ಜನಸಂಖ್ಯೆ 4.642 1981. ಈ ಊರು ವ್ಯಾಪಾರಸ್ಥಳವಾಗಿ ಅಭಿವೃದ್ಧಿಯಾಗುತ್ತಿದೆ. ಅಂಚೆ, ವಿದ್ಯುಚ್ಛಕ್ತಿ, ಶಾಲೆಗಳು, ಆರೋಗ್ಯ ಕೇಂದ್ರ ಮುಂತಾದ ನಾಗರಿಕ ಸೌಲಭ್ಯಗಳಿವೆ. ಪುರಸಭಾಡಳಿತವಿದೆ. ಈ ಊರಿನಲ್ಲಿ ಕೇಶವ ಮತ್ತು ಓಬಳ ನರಸಿಂಹ ಗುಡಿಗಳಿವೆ.

                                     

1. ಇತಿಹಾಸ

ನರಸಿಂಹಸ್ವಾಮಿ ಗುಡಿಯ ನವರಂಗಕ್ಕೆ ದ್ರಾವಿಡ ಶಿಲ್ಪ ಶೈಲಿಯ ನಾಲ್ಕು ಕಂಬಗಳಿವೆ. ಈ ಘನಾಕೃತಿಯ ಕಂಬಗಳ ಮೇಲೆ ಗಣೇಶ, ಹನುಮಂತ ಮೊದಲಾದ ದೇವತೆಗಳೂ ಪುರುಷಾಮೃಗ, ನೃತ್ಯಗಾತಿಯರು, ದರ್ಪಣಮೋಹಿನಿ, ಕಾಳಿಂಗ ಮೊದಲಾದ ಉಬ್ಬುಶಿಲ್ಪದ ರಚನೆಗಳೂ ಇವೆ.