ⓘ Free online encyclopedia. Did you know? page 74

ಕಣ್ಣಾ ಮುಚ್ಚಾಲೆ ಆಟ

ಕಣ್ಣಾ ಮುಚ್ಚಾಲೆ ಆಡಲು ಬೇಕಾಗುವ ವಸ್ತುಗಳು – ವಸ್ತುಗಳ ಅಗತ್ಯವಿಲ್ಲ ಆಟದ ವಿವರಣೆ – ಅಡಗುವ ಮತ್ತು ಅಡಗಿರುವವರನ್ನು ಹುಡುಕುವ ಆಟವೇ ಕಣ್ಣ ಮುಚ್ಚಾಲೆ ಆಟ. ಈ ಆಟವನ್ನು ಹಲವಾರು ರೀತಿಯಲ್ಲಿ ಆಡುತ್ತಿದ್ದು ಮಕ್ಕಳಿಗೆ ಪ್ರಿಯವಾದ ಆಟವಾಗಿದೆ ಹಾಗೂ ತುಂಬಾ ಹಳೆಯ ಸಾಂಪ್ರದಾಯಿಕ ಆಟವಾಗಿದೆ.ಆಡಲು ಕೆಲವರು" ಕಣ ...

ಇಸಗಲೆ

ಬಿಳಿ ಉಪ್ಪಿಗಿಡದ ಜಾತಿಯ ಸಸ್ಯ ; ಕುಂಡಲಿ ಗಿಡ ಪರ್ಯಾಯನಾಮ. ಮೈತುಂಬ ಮುಳ್ಳಿನಿಂದ ಕೂಡಿರುವ ಪೊದರು. ಬೇಲಿಯ ಗಿಡವಾಗಿ ಬೆಳೆಸುವುದಿದೆ.ಇಸಗಲೆ ಗಿಡದಲ್ಲಿ ಗಂಡು ಹೂ ಹೆಣ್ಣು ಹೂ ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ. ಹೆಣ್ಣುಗಿಡದಲ್ಲಿ ಬಿಳಿ ಬಣ್ಣದ ಹಣ್ಣುಗಳಿರುತ್ತವೆ.

ಕಟ್ಟಡದ ಶಿಲೆಗಳು

ಕಟ್ಟಡದ ಶಿಲೆಗಳು: ಧಾರಣ ಸಾಮಥರ್ಯ್‌, ಬಾಳಿಕೆ, ಕಾರ್ಯೋಪಯೋಗ, ಬಣ್ಣ ಮತ್ತು ಅಂದ-ಈ ಗುಣಗಳು ಯುಕ್ತ ಪ್ರಮಾಣದಲ್ಲಿ ಮೇಳೈಸಿರುವ ಕಲ್ಲುಗಳಿಗೆ ಈ ಹೆಸರಿದೆ. ಇವನ್ನು ಅಡಿಪಾಯಕ್ಕೂ ಗೋಡೆಗಳಿಗೂ ಉಪಯೋಗಿಸುವುದಲ್ಲದೆ ಕಟ್ಟಡದಲ್ಲಿ ಹಾಸಲೂ ಇತರ ಅಲಂಕರಣಗಳಿಗೂ ಕಂಬಗಳಿಗೂ ಬಳಸುತ್ತಾರೆ.

ಎಥಿಲೀನ್ ಆಕ್ಸೈಡ್

ಎಥಿಲೀನ್ ಆಕ್ಸೈಡ್ ಇದಕ್ಕೆ ಎಪಾಕ್ಸಿ ಈಥೇನ್, ಆಕ್ಸಿರಾನ್ ಎಂಬ ಹೆಸರುಗಳೂ ಇವೆ. ಕ್ಲೋರಿನ್ ಕರಗಿಸಿದ ನೀರಿಗೆ 0ಲಿ ಸೆ. ಉಷ್ಣತೆಯಲ್ಲಿ ಎಥಿಲೀನ್ ಅನಿಲವನ್ನು ಹಾಯಿಸಿ ಉತ್ಪತ್ತಿಯಾದ ಎಥಿಲೀನ್ ಕ್ಲೋರೊಹೈಡ್ರೀನನ್ನು ಸುಣ್ಣದೊಂದಿಗೆ ಬಟ್ಟಿ ಇಳಿಸಿ ಎಥಿಲೀನ್ ಆಕ್ಸೈಡ್ ತಯಾರಿಸುತ್ತಾರೆ. CH2=CH2+HCIO→CICH ...

ಓವ್ರೆಗಾನಿಯ

ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ, ಇದರ ಪರಿಶೋಧನೆ ಈಚಿನದು. ಮೆಕ್ಸಿಕೋದ ಮೂಲವಾಸಿ. ಮೆಕ್ಸಿಕೋದ ಹೆಸರಾಂತ ಅಧ್ಯಕ್ಷ ಡಾನ್ ಅಲ್ವಾರೊ ಓವ್ರೆಗಾನ್ ಎಂಬಾತನ ಗೌರವಾರ್ಥವಾಗಿ ಇದಕ್ಕೆ ಈ ಹೆಸರು ಕೊಡಲಾಗಿದೆ.

ಐಸೊಬಾರ್ (ಹವಾಮಾನವಿಜ್ಞಾನದಲ್ಲಿ)

ಐಸೊಬಾರ್: ಸಮಾನ ಒತ್ತಡದಲ್ಲಿರುವ ಎರಡು ಸ್ಥಳಗಳನ್ನು ಸೇರಿಸುವ ರೇಖೆ. ಉದಾಹರಣೆಗೆ ಹವಾಮಾನದ ನಕ್ಷೆಗಳಲ್ಲಿ ಈ ರೇಖೆಗಳನ್ನು ಕಾಣಬಹುದು. ಇಂಥ ಒಂದು ನಕ್ಷೆಯಲ್ಲಿ ಕಾಣುವ ಒತ್ತಡಗಳು ವೀಕ್ಷಣೆ ಮಾಡಿ ದೊರೆತ ಒತ್ತಡಗಳಲ್ಲಿ; ಬದಲು, ಸಮುದ್ರ ಮಟ್ಟಕ್ಕೆ ಸಂಸ್ಕರಿಸಿದಂಥ ಬೆಲೆಗಳು. 1 ಬಾರ್=ಚದರ ಸೆಂಟಿಮೀಟರಿಗೆ ...

ಒಳಪಟ್ಟು ಕಟ್ಟಡ

ಒಳಪಟ್ಟು ಕಟ್ಟಡ: ಕಟ್ಟಡದ ಉದ್ದದಲ್ಲೂ ಅಡ್ಡದಲ್ಲೂ ನಿರ್ದಿಷ್ಟ ಅಂತರಗಳಲ್ಲಿ ಕಂಬಗಳನ್ನು ನಿಲ್ಲಿಸಿ ಅವನ್ನು ತೊಲೆಗಳಿಂದ ಸೇರಿಸಿ ಮಾಡುವ ರಚನೆ. ಕಂಬಗಳನ್ನು ಮತ್ತು ತೊಲೆಗಳನ್ನು ಒಂದು ಅಂತಸ್ತಿನಿಂದ ಮತ್ತೊಂದು ಅಂತಸ್ತಿಗೆ ಏರಿಸಿ ಅನೇಕ ಅಂತಸ್ತುಗಳಿರುವ ಕಟ್ಟಡಗಳನ್ನು ಕಟ್ಟಬಹುದು. ಇಂಥ ಅಂತಸ್ತುಗಳು ೬- ...

ಐಸಾಕ್ರಟೀಸ್

ಐಸಾಕ್ರಟೀಸ್: ಪ್ರ.ಶ.ಪು. 436-338. ಆಟಿಕ ದೇಶದ ವಾಗ್ಮಿ. ಗ್ರೀಸಿನ ಅಧೀನ ನಗರರಾಜ್ಯವೊಂದರ ಪೌರ ತಿಯೊಡೊರಸನ ಮಗ. ಜನನ ಅಥೆನ್ಸ್‌ನಲ್ಲಿ. ಪ್ರಾಡಿಗಸ್, ಸಾಕ್ರಟೀಸರೊಂದಿಗೂ ಅನಂತರ ಥೆಸಲಿಯಲ್ಲಿ ಗೋರ್ಜಿಯಸನೊಂದಿಗೂ ವಿದ್ಯಾಭ್ಯಾಸ ಮಾಡಿದ. ಪೆಲೊಪೊನೀಸಿಯನ್ ಯುದ್ಧದ ಪರಿಣಾಮವಾಗಿ ಬಡತನ ಬಂದಾಗ ನ್ಯಾಯಾಲಯದ ಬ ...

ಕಮರ್ಷಿಯಲ್ ಸ್ಟ್ರೀಟ್, ಬೆಂಗಳೂರು

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಈಗಾಗಲೇ ಸುತ್ತಿದ್ದಿರೆಂದರೆ, ನಡೆಯಿರಿ, ಕಮರ್ಷಿಯಲ್ ಸ್ಟ್ರೀಟ್ಸ್ ಗೆ! ಈಗ ಶಾಪಿಂಗ್ ಸಮಯ. ಕಮರ್ಷಿಯಲ್ ಸ್ಟ್ರೀಟ್ಸ್ ಯಾವಾಗಲು ಲೈಟ್ ಖಂಬಗಳು ಮತ್ತು ಅಲಂಕಾರಿಕ ಲೈಟ್ ಎಳೆಗಳಿಂದ ಆವರಿಸಿರುತ್ತದೆ. ಬ್ರಿಗೇಡ್ ರೊಡ್ ಮತ್ತು ಕಾಮರಾಜ ರೊಡ್ ಮುಖಾಂತರ ಇದನ್ನು ತಲ ...

ಎಸ್.ಎಮ್.ಇ.ಆರ್.ಎ

ಎಸ್.ಎಮ್.ಇ.ಆರ್.ಎವಿನ ಸಂಕ್ಷೇಪಣವೆಂದರೆ ಸಣ್ಣ ಹಾಗು ಮಧ್ಯಮ ರೇಟಿಂಗ್ ಸಂಸ್ಥೆ. ಇದನ್ನು ೨೦೦೫ ರಂದು ಆರಂಬಿಸಿದರು. ಎಸ್.ಎಮ್.ಇ.ಆರ್.ಎವಿನ ಪ್ರಧಾನ ಕಛೇರಿಯು ಮುಂಬಯಿ,ಮಹಾರಾಷ್ಟ್ರದಲ್ಲಿ ಸ್ಥಾಪಿಸಲಾಗಿದೆ. ಇದರ ಸೇವೆಗಳೆಂದರೆ ರೇಟಿಂಗ್, ಸಂಶೊಧನೆ ಮತ್ತು ಸಲಹೆಗಳನ್ನು ನೀಡುವುದು. ಇದರ ಕ್ರೆಡಿಟ್ ಸೇವೆಯೂ ...

ಅಮಟೆಗಿಡ

ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ. ಸ್ಪಾಂಡಿಯಾಸ್ ಪಿನೇಟ ಇದರ ಸಸ್ಯವೈಜ್ಞನಿಕ ಹೆಸರು. ಕಾಡಮಟೆ, ಅಂಬಟೆ ಇದರ ಕನ್ನಡದ ಇತರ ಹೆಸರುಗಳು. ಅಮಟೆ ಗಿಡ ಮಾವು, ಗೇರು ಮುಂತಾದವುಗಳ ಸಂಬಂಧಿ. ಇದು ಸಾಧಾರಣ ಎತ್ತರದ ಮ. ಉಷ್ಣವಲಯದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಭಾರತದಲ್ಲಿ ಕನ್ಯಾಕುಮಾರಿಯಿಂ ...

ಆಂಟ್ ಲಯನ್

ಆಂಟ್ ಲಯನ್ ಪಿಪೀಲಿಕಾಸಿಂಹ ಅಥವಾ ಮಿರ್ಮಿಲಿಯಾನ್. ಇದು ಮಿರ್ಮಿಲಿಯಾನಿಡೆ ಕುಟುಂಬಕ್ಕೂ ನ್ಯೂರಾಪ್ಟೆರ ಉಪವರ್ಗಕ್ಕೂ ಸೇರಿದ ಕೀಟ. ಪ್ರೌಢಜೀವಿ ಕೊಡತಿಹುಳುವನ್ನು ಹೋಲುತ್ತದೆ. ಆದರೆ ಗಿಡ್ಡಗಿರುವ ಗದೆಯಾಕಾರದ ಕುಡಿಮೀಸೆಗಳೂ ಕಿರಿದಾದ ರೆಕ್ಕೆಗಳೂ ಇದ್ದು, ಬಾಯಿಯ ಕೊರೆಯುವ ಉಪಾಂಗಗಳಲ್ಲಿ ವ್ಯತ್ಯಾಸ ಕಂಡುಬರ ...

ದುಗ್ಗಳೆ

ದುಗ್ಗಳೆ ದೇವರ ದಾಸಿಮಯ್ಯನ ಧರ್ಮಪತ್ನಿ. ಸದಾ ಶಿವಭಕ್ತಿಯಲ್ಲಿ ನಿರತಳಾದ ಶರಣೆ. ಈ ದಂಪತಿಗಳ ಕಾಯಕನಿಷ್ಠೆ, ವಸ್ತ್ರದಾನದ ವೈಶಿಷ್ಟ್ಯಗಳನ್ನು ಬಸವಣ್ಣ, ಕೋಲಶಾಂತಯ್ಯ, ಸತ್ಯಕ್ಕ ಮೊದಲಾದ ಶರಣ ಶರಣೆಯರು ಕೊಂಡಾಡಿದ್ದಾರೆ. ದುಗ್ಗಳೆ ಅನೇಕ ಪವಾಡಗಳನ್ನು ಮಾಡಿದ್ದಾಳೆ. ದೇವರ ದಾಸಿಮಯ್ಯ ದುಗ್ಗಳೆಯನ್ನು ಮದುವೆಗ ...

ಅಗರ

ಅಗರವು ತೀರ್ಥಹಳ್ಳಿ ತಾಲೂಕಿನ ಒಂದು ಊರು. ಮಹಾರಾಷ್ಟ್ರದ ಪುರಂದರಗಢವು ಪುರಂದರದಾಸರ ಜನ್ಮಸ್ಥಳವೆಂದು ನಂಬಲಾಗಿತ್ತು. ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ ಆರ್.ಕೆ. ಪದ್ಮನಾಭ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾದೇವಿ ಆರ್. ಪ್ರಸಾದ್, ಹಿರಿಯ ವಿದ್ವಾಂಸರಾದ ಎ.ವಿ. ನಾವಡ, ವೀರಣ್ಣ ರಾಜೂರ ಮತ ...

ಉಪಾಕರ್ಮ

ಉಪಾಕರ್ಮ "ಆರಂಭ" ಬ್ರಾಹ್ಮಣ ವರ್ಣದ ಆಧುನಿಕ ಹಿಂದೂಗಳಿಂದ ಆಚರಿಸಲ್ಪಡುವ ಒಂದು ವೈದಿಕ ಕ್ರಿಯಾವಿಧಿ. ಈ ಕ್ರಿಯಾವಿಧಿಯನ್ನು ದೈನಂದಿನ ಸಂಧ್ಯಾವಂದನೆ ಮಾಡುವ ಆರ್ಯ ವೈಶ್ಯ ಸಮುದಾಯದವರೂ ಆಚರಿಸುತ್ತಾರೆ. ಉಪಾಕರ್ಮವನ್ನು ವರ್ಷಕ್ಕೆ ಒಂದು ಸಾರಿ ಶ್ರಾವಣ ಅಥವಾ ಧನಿಷ್ಠಾ ನಕ್ಷತ್ರದಲ್ಲಿ ನಡೆಸಲಾಗುತ್ತದೆ ಮತ್ತ ...

ಅಷ್ಟಾಂಗ ಮಾರ್ಗ

ಬೌದ್ಧರು ಶಮಥಸಾಧನೆಗಾಗಿ ಅಷ್ಟಾಂಗಯುಕ್ತವಾದ ಮಧ್ಯಮಮಾರ್ಗವನ್ನು ನಿರ್ದೇಶಿಸಿದ್ದಾರೆ. ಗೌತಮಬುದ್ಧನ ಮೊಟ್ಟ ಮೊದಲ ಪ್ರವಚನವಾದ ಧರ್ಮಾಚಕ್ರಪ್ರವರ್ತನ ಸೂತ್ರದಲ್ಲಿಯೇ ಈ ಎಂಟು ಅಂಗಗಳ ವಿವರಣೆ ಬರುತ್ತದೆ. ಇದನ್ನು ಆರ್ಯ-ಅಷ್ಟಾಂಗಿಕ-ಮಾರ್ಗ ಎಂದು ಬುದ್ಧನೇ ಕರೆದಿದ್ದಾನೆ. ಈ ಅಷ್ಟಾಂಗಮಾರ್ಗವೇ ಚಕ್ಷುಕರಣೆ, ...

ಕುರಾನ್

ಕುರಾನ್ ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ. ಅಲ್-ಕುರಾನ್ ಅಲ್ಲಾಹನ ವಚನವಾಗಿದೆ, ಇದನ್ನು ಅಲ್ಲಾಹು ಮಲಕ್ಗಳ ನಾಯಕರಾದ ಜಿಬ್ರೀಲ್ ". ಕುರಾನ್ ಇನ್ನೊಂದು ಹೆಸರು ಪುರ್ಕಾನ್ ಎಂದು ಆಗಿದೆ. ಪುರ್ಕಾನ್ ಅಂದರೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಸಾಧನವೆಂ ...

ಆದಿಕಾಂಡ

ಆದಿಕಾಂಡ ಎಂಬುದು ಬೈಬಲ್ನಲ್ಲಿನ ಹಳೆ ಒಡಂಬಡಿಕೆ ಎಂಬ ಭಾಗದ ಪ್ರಥಮ ಪುಸ್ತಕವಾಗಿದೆ. ಯೆಹೂದ್ಯರ ಪದ್ಧತಿಯ ಪ್ರಕಾರ ಬೈಬಲ್‌ನ ಮೊದಲಿನ ಐದು ಪುಸ್ತಕಗಳನ್ನು ಮೋಸೆಸ್ ಬರೆದದ್ದು ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದ ಆದಿಕಾಂಡವನ್ನು ಕೆಲವೊಮ್ಮೆ ಮೋಸೆಸ್‌ನ ಪ್ರಥಮ ಪುಸ್ತಕವೆಂದು ಸಹ ಕರೆಯಲಾಗುತ್ತದೆ. ಆದಿಕಾಂ ...

ಎಜೆಕಿಯಲ್

ಕ್ರಿ. ಪೂ. ಸು.592. ಯೆಹೂದಿ ಪ್ರವಾದಿಗಳಲ್ಲಿ ಒಬ್ಬ. ಈತನ ಸಿದ್ಧಿ-ಸಾಧನೆಗಳನ್ನೊಳಗೊಂಡ ಗ್ರಂಥದ ಬೈಬಲಿನಲ್ಲಿದೆ. ಎಜೆಕೆಯೆಲನ ಗ್ರಂಥದ ರೂಪರೇಷೆಗಳು ಇತರ ಪ್ರವಾದಿಗಳ ಗ್ರಂಥಗಳಿಗಿಂತ ಸುವ್ಯವಸ್ಥಿತವಾಗಿವೆ. ಆದರೆ ಅನೇಕ ಪ್ರಕರಣಗಳ ಪುನರ್ ನಿರೂಪಣೆ, ಅಪೂರ್ವ ಘಟನಾವಳಿಗಳ ಮಧ್ಯೆ ಬರುವ ಸುದೀರ್ಘ ಉಪನ್ಯಾಸಗ ...

ಸಂತ ಲೂಕ

ಪ್ರಭು ಯೇಸು ಇಸ್ರಯೇಲ್ ಜನತೆಯ ರಕ್ಷಕ ಮಾತ್ರವಲ್ಲ, ಇಡೀ ಮಾನವಕುಲದ ಉದ್ದಾರಕ. ಈ ಸತ್ಯವೇ ಲೂಕನ ಶುಭಸಂದೇಶಕ್ಕೆ ಪ್ರಧಾನ. "ದೀನದಲಿತರಿಗೆ ಶುಭಸಂದೇಶವನ್ನು ಸಾರಲು ಯೇಸು ಪವಿತ್ರಾತ್ಮರಿಂದ ಅಭಿಷಿಕ್ತರಾದವರು," ಎಂಬುದನ್ನು ಇದರಲ್ಲಿ.ಒತ್ತಿ ಹೇಳಲಾಗಿದೆ. ಬಗೆಬಗೆಯ ಕುಂದು ಕೊರತೆಗಳಿಂದ ಬಳಲುತ್ತಿರುವ ಜನತೆ ...

ಯೇಸುಸಭೆ ಮತ್ತು ಅಂತರ್-ಧರ್ಮೀಯ ಸಂವಾದ

ಬಹುಧರ್ಮೀಯತೆ ಎನ್ನುವುದು ಯಾವಾಗಲೂ ಅಸ್ತಿತ್ವದಲ್ಲಿ ಇದ್ದಂತ ಸಂಗತಿಯೆಂದು ಹಲವು ಇತಿಹಾಸಕಾರರು ಹಾಗು ಬೈಬಲ್ ವಿದ್ವಾಂಸರು ಪ್ರತಿಪಾದಿಸುತ್ತಾರೆ. ಅತ್ತಿತ್ತ ನೋಡಿದರೆ ನಮಗೆ ಕಾಣುವುದು ವಿವಿಧ ಧರ್ಮಗಳಿಗೆ ಸಂಭಂದಗಳಿಗೆ ಸಂಭಂದಪಟ್ಟ ಹಬ್ಬ ಆಚರಣೆಗಳು, ಧಾರ್ಮಿಕ ಸ್ತಳಗಳು ಮತ್ತು ಧಾರ್ಮಿಕ ಕಟ್ಟಡಗಳು! ಹಿಂ ...

ದ್ರುಪದ

ದ್ರುಪದನು ಮಹಾಭಾರತ ದ ಒಂದು ಪಾತ್ರ. ಇವನ ಇನ್ನೊಂದು ಹೆಸರು ಯಜ್ಞಸೇನ. ಇವನು ಪಾಂಚಾಲ ದೇಶದ ಅರಸ. ಬಾಲ್ಯದಲ್ಲಿ ಇವನು ದ್ರೋಣನ ಜತೆ ಕಲಿಯುವಾಗ ತನ್ನ ರಾಜ್ಯವನ್ನು ಅವನ ಜತೆ ಹಂಚಿಕೊಳ್ಳುವುದಾಗಿ ಮಾತು ಕೊಟ್ಟಿದ್ದನು. ಕಾಲಾಂತರದಲ್ಲಿ ಇವನು ರಾಜನದಾಗ ದ್ರೋಣನು ಬಂದು ಸಂಪತ್ತನ್ನು ಬೇಡಿದನು. ಹುಡುಗಾಟದಲ್ಲ ...

ಅತಿಶಯೋಕ್ತಿ

ಅತಿಶಯೋಕ್ತಿ ಅಲಂಕಾರಿಕ ಸಾಧನ ಅಥವಾ ಭಾಷಾಲಂಕಾರವಾಗಿ ಉತ್ಪ್ರೇಕ್ಷೆಯ ಬಳಕೆ. ಕಾವ್ಯ ಮತ್ತು ಭಾಷಣಕಲೆಯಲ್ಲಿ, ಅದು ಒತ್ತು ನೀಡುತ್ತದೆ, ಬಲವಾದ ಅನಿಸಿಕೆಗಳನ್ನು ಪ್ರಚೋದಿಸುತ್ತದೆ, ಮತ್ತು ಬಲವಾದ ಪ್ರಭಾವಗಳನ್ನು ಸೃಷ್ಟಿಸುತ್ತದೆ. ಭಾಷಾಲಂಕಾರವಾಗಿ, ಅದನ್ನು ಸಾಮಾನ್ಯವಾಗಿ ಅಕ್ಷರಶಃ ತೆಗೆದುಕೊಳ್ಳಬಾರದು. ...

ಬ್ರಾಡ್ವೇ ರಂಗಮಂದಿರ

ಬ್ರಾಡ್ವೇ ರಂಗಮಂದಿರ, ಸಾಮಾನ್ಯವಾಗಿ ಬ್ರಾಡ್ವೇ ಎ‌‍ಂಬುದು, ನ್ಯೂಯಾರ್ಕ್ ನಗರದ ಬ್ರಾಡ್ವೇ ರಸ್ತೆಯೊಂದಿಗೆ ನೆಲೆಸಿರುವ ರಂಗಮಂದಿರ ಜಿಲ್ಲೆ ಮತ್ತು ಲಿಂಕನ್ ಸೆಂಟರ್ಗಳಲ್ಲಿನ ೪೧ ವೃತ್ತಿಪರ ರಂಗಮಂದಿರಗಳಿಗೆ ಅನ್ವಯವಗುತ್ತದೆ. ಲಂಡನ್ನ ವೆಸ್ಟ್ ಎಂಡ್ ರಂಗಮಂದಿರದ ಜೊತೆಗೆ ಬ್ರಾಡ್ವೇ ರಂಗಮಂದಿರಗಲು ಇಂಗ್ಲೀಷ ...

ಸಾಕಿನಾಕ

ಇದೊಂದು ಮುಂಬಯಿನ ಪ್ರಮುಖ-ಉಪನಗರ. ಮೊದಲು ಇದು ಅತ್ಯಂತ ಬಿಡುವಿಲ್ಲದ ಯಂತ್ರೀಕರಣದ ಸ್ಥಳವಾಗಿತ್ತು. ಅನೇಕ ವರ್ಕ್ ಶಾಪ್, ಗಳು, ಕಾರ್ಖಾನೆಗಳು, ಇಂಡಸ್ಟ್ರಿಯಲ್ ಎಸ್ಟೇಟ್, ಗಳು, ತುಂಬಿದ್ದವು. ಟೆಕ್ಸ್ ಟೈಲ್ ಬಿಡಿಪದಾರ್ಥಗಳ ತಯಾರಿಕಾ ಘಟಕಗಳು, ಯಂತ್ರಸಾಮಗ್ರಿಗಳ ಗೋದಾಮುಗಳು, ಪ್ಯಾಕೇಜಿಂಗ್ ಕಾರ್ಖಾನೆಗಳು ...

ಚಿಮಣಿ

ಚಿಮಣಿ ಯು ಕಲ್ಲುಗಳು, ಜೇಡಿಮಣ್ಣು ಅಥವಾ ಲೋಹದಿಂದ ತಯಾರಿಸಲ್ಪಟ್ಟ ಒಂದು ವಾಸ್ತುಶಿಲ್ಪೀಯ ವಾತಾಯನ ರಚನೆ. ಇದು ಬಾಯ್ಲರ್, ಒಲೆ, ಕುಲುಮೆ, ದಹನ ಸಾಧನ ಅಥವಾ ಅಗ್ನಿಸ್ಥಳವು ಉತ್ಪತ್ತಿ ಮಾಡಿದ ಬಿಸಿ ವಿಷಯುಕ್ತ ನಿಷ್ಕಾಸ ಅನಿಲಗಳು ಅಥವಾ ಹೊಗೆಯನ್ನು ಮನುಷ್ಯರಿರುವ ಪ್ರದೇಶಗಳಿಂದ ಪ್ರತ್ಯೇಕಿಸುತ್ತದೆ. ಸಾಮಾನ ...

ಜಗತ್ತಿನ ಅತಿ ಬೃಹತ್ಪ್ರಮಾಣದ ಕಟ್ಟಡಗಳು

This list ranks the buildings throughout the world with the largest amount of usable space. NASAs 160 m tall Vehicle Assembly Building was originally built to enable simultaneous assembly and shelter for four Saturn V rockets. Boeings Everett Fac ...

ಸ್ತೂಪ

ಸ್ತೂಪ ವು ಬೌದ್ಧರ ವಾಸ್ತುಶಿಲ್ಪದಲ್ಲಿ ಪ್ರಮುಖವಾದುದು. ಬುದ್ಧನ ಅಥವಾ ಬೌದ್ಧ ಭಿಕ್ಷುವಿನ ಅವಶೇಷಗಳ ಮೇಲೆ ಕಟ್ಟಿದ ಸಮಾಧಿ ಅಥವಾ ಸ್ಮಾರಕ. ಬುದ್ಧನ ಪರಿನಿರ್ವಾಣದ ಅನಂತರ ಅವನ ಕಳೇಬರವನ್ನು ದಹಿಸಿ ಅವಶೇಷಗಳನ್ನು ಹತ್ತು ವಿಭಾಗಮಾಡಿ ಒಂದೊಂದು ವಿಭಾಗದ ಮೇಲೂ ಸ್ತೂಪಗಳನ್ನು ಕಟ್ಟಿಸಲಾಯಿತೆಂಬ ಪ್ರತೀತಿ ಇದೆ ...

ಪಂಜರ

ಪಂಜರ ವು ಹಲವುವೇಳೆ ಜಾಲರಿ, ಸಲಾಕೆಗಳು ಅಥವಾ ತಂತಿಗಳಿಂದ ತಯಾರಿಸಲಾದ ಒಂದು ಆವರಣ. ಇದನ್ನು ಒಂದು ವಸ್ತು ಅಥವಾ ಜೀವಿಯನ್ನು ನಿರ್ಬಂಧದಲ್ಲಿಡಲು ಅಥವಾ ರಕ್ಷಿಸಿಡಲು ಬಳಸಲಾಗುತ್ತದೆ. ಪಂಜರವು ಒಂದು ಪ್ರಾಣಿ ಅಥವಾ ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು, ಒಂದು ಪ್ರಾಣಿ ಅಥವಾ ವ್ಯಕ್ತಿಯನ್ನು ಸೆರೆಹಿಡಿಯುವು ...

ಗಾರೆ

ಗಾರೆ ಯು ಕಲ್ಲುಗಳು, ಇಟ್ಟಿಗೆಗಳು, ಮತ್ತು ಕಾಂಕ್ರೀಟಿನ ಕಟ್ಟಡ ಘಟಕಗಳಂತಹ ನಿರ್ಮಾಣ ಖಂಡಗಳನ್ನು ಬಂಧಿಸಲು, ಅವುಗಳ ನಡುವಿನ ಅನಿಯಮಿತ ಅಂತರಳನ್ನು ತುಂಬಿ ಮುಚ್ಚಲು, ಮತ್ತು ಕೆಲವೊಮ್ಮೆ ಕಟ್ಟಡದ ಗೋಡೆಗಳಲ್ಲಿ ಅಲಂಕಾರಿಕ ಬಣ್ಣಗಳು ಅಥವಾ ವಿನ್ಯಾಸಗಳನ್ನು ಸೇರಿಸಲು ಬಳಸಲಾಗುವ ರೂಪಿಸಬಲ್ಲ ಪೇಸ್ಟ್. ಅದರ ಅತ ...

ಬಾಣಲೆ

ಬಾಣಲೆ ಯು ಆಹಾರಗಳನ್ನು ಕರಿಯಲು, ಬಾಡಿಸಲು/ಹುರಿಯಲು, ಮತ್ತು ಕಂದುಬರಿಸಲು ಬಳಸಲ್ಪಡುವ ಚಪ್ಪಟೆ ತಳದ ಹರಿವಾಣ. ಇದು ಸಾಮಾನ್ಯವಾಗಿ ೨೦೦ ರಿಂದ ೩೦೦ ಮಿ.ಮಿ. ವ್ಯಾಸವನ್ನು ಹೊಂದಿರುತ್ತದೆ ಮತ್ತು ಹೊರಗಡೆಗೆ ಅಗಲವಾಗುವ ತುಲನಾತ್ಮಕವಾಗಿ ಕಡಿಮೆ ಎತ್ತರದ ಬದಿಗಳು, ಒಂದು ಉದ್ದನೆಯ ಕೈಹಿಡಿಯನ್ನು ಹೊಂದಿದ್ದು ಮ ...

ಲಾಭ

ಲೆಕ್ಕಶಾಸ್ತ್ರದಲ್ಲಿ, ಲಾಭ ಎಂದರೆ ಲಾಭಕರ ಮಾರುಕಟ್ಟೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಮಾಲೀಕನಿಗೆ ಹಂಚಲಾದ ಆದಾಯ. ಲಾಭವು ಮಾರುಕಟ್ಟೆ ಉತ್ಪಾದನೆಯ ಆದಾಯ ನಿರ್ಮಾಣ ಪ್ರಕ್ರಿಯೆಯಲ್ಲಿ ಮಾಲೀಕನ ಪ್ರಮುಖ ಹಿತಾಸಕ್ತಿಯಾದ ಲಾಭದಾಯಕತೆಯ ಪರಿಮಾಣವಾಗಿದೆ. ಸಾಮಾನ್ಯ ಬಳಕೆಯಲ್ಲಿ ಹಲವಾರು ಲಾಭದ ಮಾಪನಗಳಿವೆ. ಮಾರುಕಟ್ ...

ಡೈನಮೈಟ್

ಡೈನಮೈಟ್ ನೈಟ್ರೊಗ್ಲಿಸರಿನ್, ಅವಚೂಷಕಗಳು ಹಾಗೂ ಸ್ಥಿರೀಕಾರಕಗಳಿಂದ ತಯಾರಿಸಿದ ಒಂದು ಸ್ಫೋಟವ ವಸ್ತು. ಇದನ್ನು ಸ್ವೀಡಿಷ್ ರಸಾಯನಶಾಸ್ತ್ರಜ್ಞ ಹಾಗೂ ಇಂಜಿನಿಯರಾಗಿದ್ದ ಆಲ್ಫ್ರೆಡ್ ನೊಬೆಲ್ ಆವಿಷ್ಕರಿಸಿದರು ಮತ್ತು ೧೮೬೭ರಲ್ಲಿ ಸ್ವಾಮ್ಯದ ಸನ್ನದು ಪಡೆದರು. ಇದು ಕ್ಷಿಪ್ರವಾಗಿ ಕೋವಿಮದ್ದಿನ ಹೆಚ್ಚು ಶಕ್ತಿ ...

ಅಗ್ನಿಚಯನ

ಅತಿರಾತ್ರ ಅಗ್ನಿಚಯನ "ರಾತ್ರೋರಾತ್ರಿ ನಿರ್ವಹಿಸಲಾದ ಅಗ್ಗಿಷ್ಟಿಕೆಯ ನಿರ್ಮಾಣ") ಆಧುನಿಕ ಕಾಲದ ಹಿಂದೂ ಧರ್ಮದ ಪೂರ್ವವರ್ತಿಯಾದ ವೈದಿಕ ಧರ್ಮದ ಒಂದು ಶ್ರೌತ ಕ್ರಿಯಾವಿಧಿ ಮತ್ತು ವೈದಿಕ ಆಚರಣಾ ಶ್ರೇಣಿ ವ್ಯವಸ್ಥೆಯ ಪ್ರಕಾರ ಇದನ್ನು ಅತ್ಯಂತ ಶ್ರೇಷ್ಠ ಕ್ರಿಯಾವಿಧಿಯೆಂದು ಪರಿಗಣಿಸಲಾಗುತ್ತದೆ. ಇದು ವಿಶ್ವ ...

ರಾಧಮ್ಮ ವೆಂಕಟೇಶ್

ಶ್ರೀಮತಿ ರಾಧಮ್ಮ ವೆಂಕಟೇಶ್, ಪ್ರಸಕ್ತ ಬೆಂಗಳೂರು ಮಹಾನಗರ ಪಾಲಿಕೆ ಯ ಹೊರಮಾವು ವಾರ್ಡ್ ನ ಪುರಪಿತೃವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಸಕ ಬಿ.ಎ._ಬಸವರಾಜ ವ್ಯಾಪ್ತಿಯ ಕೆ ಆರ್ ಪುರಂ ಕ್ಷೇತ್ರದ ಅಡಿಯಲ್ಲಿ ಹೊರಮಾವು ವಾರ್ಡ್ ಬರುತ್ತದೆ. ರಾಧಕ್ಕ ಎಂದೇ ತಮ್ಮ ವಾರ್ಡ್ ನಲ್ಲಿ ಜನಜನಿತರಾದ ರಾಧಮ್ಮ, ಸ ...

ಕಲ್ಕಟ್ಟಣೆ

ಕಲ್ಕಟ್ಟಣೆ: ಕೆರೆಗಳ ಏರಿಯ ಕೆಳಭಾಗದಲ್ಲಿ ಸಾಮಾನ್ಯವಾಗಿ ನಿರ್ಮಿಸಲಾಗುವ ಒಂದು ಬಗೆಯ ತಡೆಗೋಡೆ. ಕೆಲವೆಡೆ ನದಿಯ ಅಕ್ಕಪಕ್ಕಗಳಲ್ಲೂ ಇಂಥ ತಡೆಗೋಡೆಯನ್ನು ಹಾಕುತ್ತಾರೆ. ಕೆರೆ ಅಥವಾ ನದಿ ದಂಡೆಯ ಸವೆತವನ್ನು ತಡೆಗಟ್ಟುವುದೇ ಇದರ ಉದ್ದೇಶ. ಪ್ರವಾಹದ ಅಥವಾ ಅಲೆಗಳ ಹೊಡೆತವನ್ನು ಎದುರಿಸಿ ನಿಲ್ಲಬಲ್ಲಂಥ ಕಾಡುಗ ...

ಬಾನಾಜಿ ಲಿಮ್ಜಿ ಪಾರ್ಸಿ ಅಘಿಯಾರಿ

ಮುಂಬಯಿ ನಗರದ ದಕ್ಷಿಣ ಮುಂಬಯಿ ಜಿಲ್ಲೆಯ ಪುರಾತನ ಕೋಟೆಯನ್ನು ಹೋಲುವ, ಬಾನಾಜಿ ಲಿಮ್ಜಿ ಪಾರ್ಸಿ ಆಘಿಯಾರಿ/ಅಗಿಯಾರಿ, ೩೦೦ ವರ್ಷಗಳ ಹಬ್ಬವನ್ನು ಆಚರಿಸುತ್ತಿದೆ. ಇದು ದಕ್ಷಿಣ ಮುಂಬಯಿ ನ ಹಾರ್ನಿಮನ್ ಸರ್ಕಲ್ ನ ಹತ್ತಿರದ ಚಿಕ್ಕಗಲ್ಲಿಯಲ್ಲಿದೆ. ೧೭೦೯ ರಲ್ಲಿ ಆಗಿನ ಬೊಂಬಾಯಿನ ಒಬ್ಬ ಪ್ರಗತಿಶೀಲ ಪಾರ್ಸಿ ವ್ ...

ಮೆಟ್ಟಲು ಸಾಲು

ಮೆಟ್ಟಲು ಸಾಲು ಮೆಟ್ಟಲು ಎಂದು ಕರೆಯಲ್ಪಡುವ ಚಿಕ್ಕದಾದ ಲಂಬ ದೂರಗಳಾಗಿ ವಿಭಜಿಸುವ ಮೂಲಕ, ದೊಡ್ಡದಾದ ಲಂಬವಾದ ದೂರಕ್ಕೆ ಸೇತುವೆಯಾಗಲು ವಿನ್ಯಾಸಗೊಳಿಸಲಾದ ಒಂದು ನಿರ್ಮಾಣ. ಮೆಟ್ಟಲುಗಳು ನೇರವಾಗಿರಬಹುದು, ದುಂಡಾಗಿರಬಹುದು, ಅಥವಾ ಕೋನಗಳಲ್ಲಿ ಜೋಡಣೆಗೊಂಡ ಎರಡು ಅಥವಾ ಹೆಚ್ಚು ನೇರ ತುಂಡುಗಳನ್ನು ಹೊಂದಿರಬ ...

ಹಾಸುಗಲ್ಲು

ಹಾಸುಗಲ್ಲು ನಿಆಯತ ಅಥವಾ ಚೌಕಾಕಾರದಲ್ಲಿ ಕತ್ತರಿಸಿದ ಸಾಮಾನ್ಯ ಚಪ್ಪಟೆ ಕಲ್ಲು. ಇದನ್ನು ಸಾಮಾನ್ಯವಾಗಿ ಹಾದಿ ಚಪ್ಪಡಿಗಳು ಅಥವಾ ನಡೆದಾರಿಗಳು, ಒಳಾಂಗಣಗಳು, ನೆಲಹಾಸು, ಬೇಲಿಗಳು ಹಾಗೂ ಛಾವಣಿ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಇದನ್ನು ಸ್ಮಾರಕಗಳು, ಸಮಾಧಿಶಿಲೆಗಳು, ಮುಖಭಾಗಗಳು ಹಾಗೂ ಇತರ ನಿರ್ಮಾಣಕ್ಕಾಗ ...

ಸ್ಪರ್ ಬ್ಯಾಟರಿ

ಸ್ಪರ್ ಬ್ಯಾಟರಿ ಗಿಬ್ರಾಲ್ಟರ್ನಲ್ಲಿರುವ ಬ್ರಿಟಿಷ್ ಓವರ್ಸೀಸ್ ಟೆರಿಟರಿಯ ಒಂದು ಫಿರಂಗಿದಳದ ತುಪಾಕಿಗಳ ಸಾಲು. ಇದು ಓ ಹಾರಾ ನ ಬ್ಯಾಟರಿಯ ನೈಋತ್ಯಕ್ಕಿರುವ ರಾಕ್ ನೇಚರ್ ರಿಸರ್ವ್ ನ ದಕ್ಷಿಣ ಅಂತ್ಯದ ಅಪ್ಪರ್ ಬ್ಯಾಟರಿ ಪ್ರದೇಶದಲ್ಲಿ ಇದೆ. ಒಂದು 9.2-ಇಂಚಿನ ಮಾರ್ಕ್ X ಬ್ರೀಚ್ ಲೋಡಿಂಗ್ ಗನ್ ಅನ್ನು 190 ...

ಬಹುವ್ರೀಹಿ ಸಮಾಸ

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು. ಹಣೆಗಣ್ಣ, ಮುಕ್ಕಣ್ಣ, ನಿಡುಮೂಗ - ಈ ಪದಗಳನ್ನು ಬಿಡಿಸಿ ಬರೆದರೆ, ಹಣೆಯಲ್ಲಿ + ಕಣ್ಣು ಉಳ್ಳವನು ಯಾರೋ ಅವನು - ಹಣೆಗಣ್ಣ ಶಿವ ಮೂರು + ಕಣ್ಣು ಉಳ್ಳವನು ಯಾರೋ ಅವನು - ಮ ...

ಕಸೂರ್

ಕಸೂರ್ ಒಂದು ಪಶ್ಚಿಮ ಪಾಕಿಸ್ಥಾನದ ಲಾಹೋರ್ ಜಿಲ್ಲೆಯ ಪಟ್ಟಣ.ಈ ಪಟ್ಟಣವು ಬೀಯಾಸ್ ನದಿಯ ಹಳೆಯ ದಡದ ಮೇಲೆ ಲಾಹೋರಿಗೆ ದಕ್ಷಿಣಾಗ್ನೇಯದಲ್ಲಿ 34 ಮೈಲಿಗಳ ದೂರದಲ್ಲಿದೆ. ಭಾರತದ ಅಮೃತಸರ ಮತ್ತು ಫಿರೋಪುರಗಳ ಮೇಲಿರುವ ಖೆಮ್ ಕರನ್ ಮತ್ತು ಹುಸೇನಿವಾಲ ಇದರ ಎದುರಿಗೆ ಗಡಿಯಾಚೆ ಇರುವ ಪಟ್ಟಣಗಳು. ಕಸೂರಿನ ಜನಸಂಖ್ ...

ಉತ್ಕಲ

ಉತ್ಕಲ: ಉತ್ಕಲಜನ ವಾಸಿಸುತ್ತಿದ್ದ ಕಾರಣದಿಂದ ಅದೇ ಹೆಸರಿನಿಂದ ಪ್ರಸಿದ್ಧವಾಗಿದ್ದ ದೇಶ. ಓಢ್ರ, ಕಲಿಂಗ ದೇಶಗಳಿಗೆ ಹೊಂದಿಕೊಂಡಿದ್ದು ಈ ದೇಶಕ್ಕೆ ರಾಂಜಿಯ ಬಳಿಯ ಬಲಸೋರ, ಮೋಹರ್ದಗಾ ಮತ್ತು ಮಧ್ಯಪ್ರದೇಶದ ಸುಗರಜ ಸೇರಿದ್ದುವು. ದುರ್ಯೋಧನನ ಆಜ್ಞಾನುಸಾರವಾಗಿ ಕರ್ಣ ಈ ದೇಶವನ್ನೂ ಓಢ್ರವನ್ನೂ ಗೆದ್ದನೆಂದು ಹ ...

ಸೋಮನಾಥಪುರ

ಸೋಮನಾಥಪುರ ಮೈಸೂರು ನಗರದಿಂದ ೩೦ ಕಿ.ಮಿ ದೂರದಲ್ಲಿರುವ ಒಂದು ಪಟ್ಟಣ. ಇದು ಹೊಯ್ಸಳರು ಕಟ್ಟಿಸಿದ ಚೆನ್ನಕೇಶವ ದೇವಾಲಯಕ್ಕೆ ಹೆಸರುವಾಸಿ. ಈ ದೇವಾಲಯವನ್ನು ೧೨೬೮ರಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ದಂಡನಾಯಕನಾಗಿದ್ದ ಸೋಮ ಎಂಬಾತನು ಕಟ್ಟಿಸಿದನು. ಇದು ಇಂದು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಬೆಳೆದಿದೆ. ಕ ...

ಸೂಕ್ಷ್ಮಾಣುಗಳಿಂದ ಹರಡುವ ರೋಗಗಳು

ನಮ್ಮ ಸುತ್ತಲೂ ಅನೇಕ ರೀತಿಯ ಸೂಕ್ಷ್ಮಾಣು ಜೀವಿಗಳು ಇವೆ.ಕೆಲವು ನಮಗೆ ದಿನನಿತ್ಯವೂ ಉಪಯುಕ್ತವುಗಳಾಗಿವೆ.ಇನ್ನು ಕೆಲವು ಅನೆಕ ರೋಗಗಳನ್ನು ಉಂಟುಮಾಡುತ್ತವೆ. ರೋಗಕಾರಕ ಸೂಕ್ಷ್ಮಾಣುಗಳು ನ್ಮ ದೇಹವನ್ನು ಅನೇಕ ರೀತಿಯಲ್ಲಿ ಪ್ರವೇಶಿಸುವವು.ನಾವು ಉಸಿರಾಡುವ ಗಾಳಿಯ ಮೂಲಕ,ಸೇವಿಸುವ ನೀರು,ಆಹಾರದ ಮೂಲಕ,ರೋಗಿಯ ...

ಅಂಗವಿಕಲತೆ

ಅಂಗವಿಕಲತೆ ಎಂದರೆ ಒಬ್ಬ ವ್ಯಕ್ತಿಯ ಶಾರೀರಿಕ ಕಾರ್ಯನಿರ್ವಹಣೆ, ಚಲನಶೀಲತೆ, ಕೌಶಲ್ಯ ಅಥವಾ ದೇಹಬಲದ ಮೇಲಿರುವ ಮಿತಿ. ಇತರ ಅಂಗವಿಕಲತೆಗಳಲ್ಲಿ ಉಸಿರಾಟದ ಅಸ್ವಸ್ಥತೆಗಳು, ಕುರುಡುತನ, ಅಪಸ್ಮಾರ ಮತ್ತು ನಿದ್ರಾ ಅಸ್ವಸ್ಥತೆಗಳಂತಹ ದೈನಂದಿನ ಜೀವನದ ಇತರ ಅಂಶಗಳನ್ನು ಸೀಮಿತಗೊಳಿಸುವ ದುರ್ಬಲತೆಗಳು ಸೇರಿವೆ. ಪ ...

ಕರುಳುಹುಳು ನಿರೋಧಕಗಳು

ಕರುಳುಹುಳು ನಿರೋಧಕಗಳು: ಮನುಷ್ಯ, ಹಂದಿ, ಕುದುರೆ, ನಾಯಿ, ದನಗಳಲ್ಲಿ ಸೇರಿಕೊಂಡು ಬೆಳೆಯುವ ಉಪಜೀವಿಗಳಾದ ಜಂತುಹುಳು ಮತ್ತಿತರ ಪರಪಿಂಡಿಗಳನ್ನು ಹೋಗಲಾಡಿಸಲು ಬಳಸುವ ಮದ್ದುಗಳಿವು. ಈ ಹುಳುಗಳು ಅಂಗಗಳಲ್ಲಿ ಸೇರಿದ್ದರೆ ತಲೆನೋವು, ದುರ್ಬಲತೆ, ರಕ್ತಕೊರೆ, ಚರ್ಮರೋಗಗಳು, ಶ್ವಾಸರೋಗಗಳು, ಜ್ವರ, ಅಜೀರ್ಣ, ಹ ...

ಜನರಲ್ ಮತ್ತು ಲ್ಯಾಪರೋಸ್ಕೋಪಿಕ್ ಸರ್ಜರಿ

ಸಾಮಾನ್ಯ ಶಸ್ತ್ರಚಿಕಿತ್ಸೆ ಜನರಲ್ ಶಸ್ತ್ರಚಿಕಿತ್ಸೆ ಅನ್ನನಾಳ, ಜಠರ, ಸಣ್ಣ ಕರುಳು, ದೊಡ್ಡ ಕರುಳು, ಯಕೃತ್ತು, ಮೇದೋಜೀರಕ ಗ್ರಂಥಿ, ಪಿತ್ತಕೋಶದ ಮತ್ತು ಪಿತ್ತರಸ, ಮತ್ತು ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆ ತಜ್ಞರು ಲಭ್ಯತೆ ಆಧರಿಸಿ ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯ ಸೇರಿದಂತೆ ಕಿಬ್ಬೊಟ್ಟೆಯ ್ ...

ಬಿಳಿ ರಕ್ತ ಕಣಗಳು

ಬಿಳಿ ರಕ್ತ ಕಣಗಳುಇವು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಠೆಯ ಜೀವಕೋಶಗಳು. ಇವು ಸಾಂಕ್ರಾಮಿಕ ರೋಗ ಹಾಗೂ ವಿದೇಶೀ ಆಕ್ರಮಣಕಾರರ ವಿರುದ್ಧ ಹೋರಾಡುವ ಜೀವಕೋಶಗಳಾಗಿವೆ. ಎಲ್ಲಾ ಬಿಳಿ ರಕ್ತ ಕಣಗಳು ಮೂಳೆಮಜ್ಜೆಯ ಒಂದು ಬಹುಪ್ರಬಲ ಜೀವಕೋಶವಾದ ಹೆಮ್ಯಾಟೋಪಯಟಿಕ್ ಕಾಂಡಕೋಶದಿಂದ ನಿರ್ಮಾಣಗೊಂಡಿರುತ್ತವೆ. ಬಿಳಿ ರಕ ...

ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು

ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆಯ ಭಾಗದ ಭಕ್ತರ ಪಾಲಿಗೆ ನಡೆದಾಡುವ ದೇವರು. ಗುರುವಿಲ್ಲದೆ ಅರಿವಿನ ಆಗರವಾದ ಅಪರೂಪದ ಶಿವಯೋಗಿ ಶ್ರೀ ಖಾಸ್ಗತೇಶ್ವರ ಸ್ವಾಮಿಗಳು.