ⓘ Free online encyclopedia. Did you know? page 50

ಹಲಾಲ್

ಹಲಾಲ್ ಎಂಬುದು ಒಂದು ಅರಬ್ಬಿ ಶಬ್ದವಾಗಿದ್ದು ಇದರರ್ಥ ಅಂಗೀಕಾರಾರ್ಹವಾದುದು ಎಂದಾಗಿದೆ. ಕುರಾನ್‍ನಲ್ಲಿ, ಹಲಾಲ್ ಶಬ್ದವು ಹರಾಮ್ ನಿಷಿದ್ಧ ಶಬ್ದಕ್ಕೆ ವಿರುದ್ಧಾರ್ಥಕವಾಗಿದೆ. ಹಲಾಲ್ ಪದವನ್ನು ವಿಶೇಷವಾಗಿ ಇಸ್ಲಾಮಿ ಆಹಾರ ನಿಯಮಗಳೊಂದಿಗೆ ಸಂಬಂಧಿಸಲಾಗುತ್ತದೆ, ಮತ್ತು ವಿಶೇಷವಾಗಿ ಆ ಅಗತ್ಯಗಳಿಗೆ ಅನುಗುಣ ...

ಅಲಗು

ಈ ಲೇಖನ ಆಯುಧ, ಉಪಕರಣದ ಭಾಗದ ಬಗ್ಗೆ. ಅಲಗು ಶಬ್ದದ ಇತರ ಬಳಕೆಗಳಿಗಾಗಿ ಅಲಗು ದ್ವಂದ್ವ ನಿವಾರಣೆ ನೋಡಿ. ಅಲಗು ಅಂಚನ್ನು ಹೊಂದಿರುವ ಒಂದು ಉಪಕರಣ, ಆಯುಧ, ಅಥವಾ ಯಂತ್ರದ ಭಾಗ. ಇದನ್ನು ಮೇಲ್ಮೈಗಳು ಅಥವಾ ವಸ್ತುಗಳನ್ನು ತೂತುಮಾಡಲು, ಕೊಚ್ಚಲು, ಕತ್ತರಿಸಲು ಅಥವಾ ಹೆರೆಯಲು ವಿನ್ಯಾಸಗೊಳಿಸಲಾಗಿರುತ್ತದೆ. ಅ ...

ಕೊಕ್ಕು

ಕೊಕ್ಕು ಹಕ್ಕಿಗಳಲ್ಲಿ ಕಾಣಬರುವ ವಿಶೇಷ ರೀತಿಯ ಒಂದು ಅಂಗ. ಇದು ಹಕ್ಕಿಗಳಿಗೆ ಅತ್ಯಂತ ಉಪಯುಕ್ತ ರಚನೆ. ಇದರ ಉಪಯೋಗಗಳೂ ವೈವಿಧ್ಯಮಯ: ಆಹಾರವನ್ನು ಹಿಡಿಯುವಲ್ಲಿ ಮತ್ತು ಗೂಡು ಕಟ್ಟುವ ಕಾರ್ಯದಲ್ಲಿ ಇದು ಕೈಯಂತೆಯೂ ಆಹಾರ ಸೇವನೆಯಲ್ಲಿ ಬಾಯಿಯಂತೆಯೂ ಮರಿಗಳಿಗೆ ಗುಟುಕು ಕೊಡುವ ಕಾರ್ಯದಲ್ಲಿ ಚಮಚದಂತೆಯೂ ಶತ್ ...

ಕ್ರೀಡಾಪಟು

ಕ್ರೀಡಾಪಟು ಎಂದರೆ ದೈಹಿಕ ಶಕ್ತಿ, ವೇಗ ಅಥವಾ ಸಹಿಷ್ಣುತೆಯನ್ನು ಒಳಗೊಳ್ಳುವ ಒಂದು ಅಥವಾ ಹೆಚ್ಚು ಕ್ರೀಡೆಗಳಲ್ಲಿ ಸ್ಪರ್ಧಿಸುವ ವ್ಯಕ್ತಿ. ಕುದುರೆ ಸವಾರಿ ಅಥವಾ ವಾಹನ ಚಾಲನೆಯಂತಹ, ಇತರ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಈ ಪದದ ಅನ್ವಯ ಸ್ವಲ್ಪಮಟ್ಟಿಗೆ ವಿವಾದಾಸ್ಪದವಾಗಿದೆ. ಕ್ರೀಡಾಪಟುಗಳು ವೃತ್ತಿಪರ ...

ಚಾಕೋಲೆಟ್

ಚಾಕಲಿಟ್ ಉಷ್ಣವಲಯದ ಥಿಯೋಬ್ರೋಮಾ ಕಕೇಯೋ ಮರದ ಬೀಜದಿಂದ ಉತ್ಪಾದಿಸಲಾದ ಹಲವಾರು ಸಂಸ್ಕರಿಸದ ಮತ್ತು ಸಂಸ್ಕರಿಸಿದ ಆಹಾರಗಳನ್ನು ಒಳಗೊಳ್ಳುತ್ತದೆ. ಕನಿಷ್ಠಪಕ್ಷ ಮೂರು ಸಾವಿರ ವರ್ಷಗಳಿಂದ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಕಾವೋವನ್ನು ಬೇಸಾಯಮಾಡಲಾಗಿದೆ, ಮತ್ತು ಅದರ ಅತ್ಯಂತ ಮುಂಚಿನ ಬಳಕೆ ...

ಖರ್ಚು

ಸಾಮಾನ್ಯ ಬಳಕೆಯಲ್ಲಿ, ಖರ್ಚು ಎಂದರೆ ಒಂದು ವಸ್ತು ಅಥವಾ ಸೇವೆಗಾಗಿ, ಅಥವಾ ವೆಚ್ಚಗಳ ಒಂದು ವರ್ಗಕ್ಕೆ ಪಾವತಿಸಲು ಮತ್ತೊಬ್ಬ ವ್ಯಕ್ತಿ ಅಥವಾ ಗುಂಪಿಗೆ ಹಣದ ಹೊರಹರಿವು. ಬಾಡಿಗೆದಾರನಿಗೆ, ಬಾಡಿಗೆಯು ಖರ್ಚು ಆಗಿರುತ್ತದೆ. ವಿದ್ಯಾರ್ಥಿಗಳು ಅಥವಾ ತಂದೆತಾಯಿಗಳಿಗೆ, ಶಿಕ್ಷಣ ಶುಲ್ಕವು ಖರ್ಚು ಆಗಿರುತ್ತದೆ. ...

ಮಿತವ್ಯಯ

ಮಿತವ್ಯಯ ಎಂದರೆ ಆಹಾರ, ಸಮಯ ಅಥವಾ ಹಣದಂತಹ ಉಪಭೋಗ್ಯ ಸಂಪನ್ಮೂಲಗಳ ಬಳಕೆಯಲ್ಲಿ ಮಿತವಾಗಿರುವ, ಉಳಿಸುವ, ಹಾಳತವಾಗಿರುವ, ಜಾಗರೂಕವಾಗಿರುವ ಅಥವಾ ದುಂದುಮಾಡದಿರುವ ಮತ್ತು ದುಂದು ವೆಚ್ಚ, ಅದ್ದೂರಿತನ ಅಥವಾ ಪೋಲು ವೆಚ್ಚವನ್ನು ತಪ್ಪಿಸುವ ಗುಣ.

ಮೊಲ

ಪ್ರಪಂಚದ ಅನೇಕ ಕಡೆಗಳಲ್ಲಿ ಕಂಡು ಬರುವ ಸಣ್ಣ ಸಸ್ತನಿಗಳಾದ ಮೊಲ ಗಳು ಲೆಪೋರಿಡೆ ಎಂಬ ಕುಟುಂಬದಲ್ಲಿ ಲ್ಯಾಗೋಮೋರ್ಫ಼ಾ ಎಂಬ ವರ್ಗಕ್ಕೆ ಸೇರುತ್ತವೆ. ಮೊಲಗಳಲ್ಲಿ ಯುರೋಪಿಯನ್ ಮೊಲ, ಹತ್ತಿ ಬಾಲದ ಮೊಲ ಇವೇ ಮುಂತಾಗಿ ಸುಮಾರು ೮ ಪ್ರಭೇದಗಳಿವೆ.

ಅಪಸ್ಮಾರ

ಮರೆವು ಲೇಖನಕ್ಕಾಗಿ ಇಲ್ಲಿ ನೋಡಿ. ಅಪಸ್ಮಾರ ಸೆಳವುಗಳ ಲಕ್ಷಣಗಳಿರುವ ನರವೈಜ್ಞಾನಿಕ ಅಸ್ವಸ್ಥತೆಗಳ ಒಂದು ಗುಂಪು. ಅಪಸ್ಮಾರದ ಸೆಳವುಗಳು ಸಂಕ್ಷಿಪ್ತ ಹಾಗೂ ಸುಮಾರಾಗಿ ಗುರುತಿಸಲಾಗದಷ್ಟು ಅವಧಿಗಳಿಂದ ದೀರ್ಘಾವಧಿಗಳವರೆಗೆ ಬದಲಾಗಬಹುದಾದ ಜೋರಾದ ಅಲುಗಾಟದ ಘಟನೆಗಳು. ಈ ಘಟನೆಗಳು ಸಂದರ್ಭಾನುಸಾರ ಮೂಳೆಮುರಿತ ...

ಥೈರಾಯಿಡ್ ಗ್ರಂಥಿ

ಥೈರಾಯಿಡ್ ಗ್ರಂಥಿಯು ಕುತ್ತಿಗೆಯಲ್ಲಿ ಶ್ವಾಸನಾಳದ ಮುಂದೆ ಗಂಟಲಿನ ಕೆಳಗೆ ಇದೆ. ಈ ಗ್ರಂಥಿಯು ಥ್ಐರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ. ಇದು ಅಯೋಡಿನ್ ಇಂದ ಕೂಡಿದ ಅಮೈನೋ ಆಮ್ಲವಾಗಿದೆ. ಥೈರಾಕ್ಸಿನ್ ದೇಹದಲ್ಲಿ ನಡೆಯುವ ಚಯಾಪಚನೆಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಉತ್ಕರ್ಷೆಯ ...

ಕೀಟ (ಪಿಡುಗು)ನಿಯಂತ್ರಣ

ಕೀಟ ನಿಯಂತ್ರಣ ವೆಂದರೆ ಕೀಟ ಬಾಧೆ ತಡೆಯುವಿಕೆ ಅಥವಾ ಕೀಟ ನಿರ್ವಹಣಾ ವಿಧಾನ ಅಥವಾ ಜೀವವರ್ಗಗಳ ನಿಯಂತ್ರಣ ಎಂದು ವ್ಯಾಖ್ಯಾನಿಸಬಹುದಾಗಿದೆ.ಯಾಕೆಂದರೆ ಇಂತಹ ಕೀಟವು ಸಾಮಾನ್ಯವಾಗಿ ವ್ಯಕ್ತಿಯ ಆರೋಗ್ಯ,ಸುತ್ತಲಿನ ಪರಿಸರ ಅಥವಾ ಆರ್ಥಿಕತೆಗೆ ತೊಡಕನ್ನುಂಟು ಮಾಡಬಹುದಾಗಿದೆ. ಕೀಟ ನಿಯಂತ್ರಣ ಪ್ರಕ್ರಿಯೆಯು ಕೃಷ ...

ಅನುಕೂಲ

ಅನೂಕೂಲಕರ ಕಾರ್ಯವಿಧಾನಗಳು, ಉತ್ಪನ್ನಗಳು ಮತ್ತು ಸೇವೆಗಳು ಪ್ರವೇಶಿಸುವಿಕೆಯ ಸರಾಗತೆಯನ್ನು ಹೆಚ್ಚಿಸಲು, ಸಂಪನ್ಮೂಲಗಳನ್ನು ಉಳಿಸಲು ಮತ್ತು ಹತಾಶೆಯನ್ನು ಕಡಿಮೆಮಾಡಲು ಉದ್ದೇಶಿತವಾಗಿರುತ್ತವೆ. ಅನುಕೂಲ ಒಂದು ತುಲನಾತ್ಮಕ ಪರಿಕಲ್ಪನೆಯಾಗಿದೆ, ಮತ್ತು ಸಂದರ್ಭವನ್ನು ಆಧರಿಸಿರುತ್ತದೆ. ಉದಾಹರಣೆಗೆ, ಮೋಟಾರ ...

ಅಕ್ಷಯ ತೃತೀಯಾ

ವೈಶಾಖ ಮಾಸದ ಶುಕ್ಲ ಪಕ್ಷ ತದಿಗೆಯನ್ನು ’ಅಕ್ಷಯ ತೃತೀಯೆ’ಎಂದು ಕರೆಯುವರು. ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ ಮಂಗಳಕರವಾದ ಸಿದ್ದಿಗಳು ಉಂಟಾಗುವವು ಎಂಬ ನಂಬಿಕೆಯಿದೆ. ಇದು ಹಿಂದುಗಳು ಅತ್ಯಂತ ಶುಭಪ್ರದವೆಂದು ಪರಿಗಣಿಸುವ ಮೂರು ದಿನಗಳಲ್ಲಿ ಒಂದಾಗಿದೆ. ಅವುಗಳೆಂದರೆ ಅಕ್ಷಯ ...

ಕಾರ್ಯದರ್ಶಿ

ಕಾರ್ಯದರ್ಶಿ ಅಥವಾ ಆಪ್ತ ಸಹಾಯಕ ನು ಬಗೆಬಗೆಯ ಯೋಜನಾ ನಿರ್ವಹಣೆ, ಸಂವಹನ, ಅಥವಾ ಸಂಘಟನಾ ಕೌಶಲಗಳನ್ನು ಬಳಸಿ ಕಾರ್ಯನಿರ್ವಾಹಕರು ಸೇರಿದಂತೆ ಆಡಳಿತ ಮಂಡಳಿಗೆ ಬೆಂಬಲ ನೀಡುವ ಕೆಲಸವನ್ನು ಮಾಡುವ ವ್ಯಕ್ತಿ. ಆದರೆ ಈ ಪಾತ್ರವನ್ನು ಆಪ್ತ ಸಹಾಯಕನಿಂದ ಭಿನ್ನವಾಗಿರುವ ಕಾರ್ಯನಿರ್ವಾಹಕ ಕಾರ್ಯದರ್ಶಿಯ ಪಾತ್ರದೊಂದ ...

ಮೈಕ್ರೊ ಬಯಾಲಾಜಿ

ಸೂಕ್ಷ್ಮಜೀವ ಈ ಘಟಕ ಗುರಿ ಸೂಕ್ಷ್ಮಜೀವಿಗಳ ಜೀವಶಾಸ್ತ್ರ ಆಧಾರವಾಗಿರುವ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ನೀವು ಶಕ್ತಗೊಳಿಸಿ. ನಾವು ದೊಡ್ಡ ಜೀವಿಗಳಿಂದ ಸೂಕ್ಷ್ಮಜೀವಿಗಳ ಪ್ರತ್ಯೇಕಿಸುವ ತಮ್ಮ ಜೀವಶಾಸ್ತ್ರ ಅಂಶಗಳನ್ನು ಪರಿಶೀಲಿಸುವ ಮೂಲಕ ಈ ಗುರಿ ಸಾಧಿಸಲು ಕಾಣಿಸುತ್ತದೆ. ನಾವು ಪರಿಷ್ಕರಿಸಲು ಮತ್ ...

ತಲೆನೋವು

ತಲೆನೋವು ಮುಖ, ತಲೆ, ಅಥವಾ ಕುತ್ತಿಗೆಯಲ್ಲಿರುವ ನೋವಿನ ಲಕ್ಷಣವಾಗಿರುತ್ತದೆ. ಇದು ಮೈಗ್ರೇನ್‌, ಒತ್ತಡ ಪ್ರಕಾರದ ತಲೆನೋವು ಅಥವಾ ಸಮೂಹ ತಲೆನೋವಾಗಿ ಉಂಟಾಗಬಹುದು. ಪದೆಪದೇ ಬರುವ ತಲೆನೋವುಗಳು ಸಂಬಂಧಗಳು ಮತ್ತು ಉದ್ಯೋಗದ ಮೇಲೆ ಪ್ರಭಾವ ಬೀರಬಹುದು. ತೀವ್ರ ತಲೆನೋವು ಇರುವವರಲ್ಲಿ ಖಿನ್ನತೆಯಾಗುವ ಹೆಚ್ಚಿನ ...

ಒಕ್ಕಲು ಜಮೀನು

ಒಕ್ಕಲು ಜಮೀನು ಪ್ರಧಾನವಾಗಿ ಕೃಷಿ ಪ್ರಕ್ರಿಯೆಗಳಿಗೆ ಮೀಸಲಿಡಲಾದ ಭೂಪ್ರದೇಶ. ಆಹಾರ ಮತ್ತು ಇತರ ಬೆಳೆಗಳನ್ನು ಉತ್ಪಾದಿಸುವುದು ಇವುಗಳ ಪ್ರಧಾನ ಉದ್ದೇಶವಾಗಿದೆ; ಆಹಾರ ಉತ್ಪಾದನೆಯಲ್ಲಿ ಇದು ಮೂಲಭೂತ ಸೌಕರ್ಯವಾಗಿದೆ. ಈ ಪದವನ್ನು ವಿಶೇಷೀಕೃತ ಘಟಕಗಳಿಗೆ ಬಳಸಲಾಗುತ್ತದೆ, ಉದಾಹರಣೆಗೆ, ಕೃಷಿಯೋಗ್ಯ ಜಮೀನು, ...

ಇನೋಸಿಟಾಲ್

ಇನೋಸಿಟಾಲ್ - ಶರೀರದಲ್ಲಿ ಉತ್ಪತ್ತಿಯಾಗಿ, ದೇಹದ ಬೆಳೆವಣಿಗೆಗೆ ಅತ್ಯಾವಶ್ಯಕವಾಗಿರುವ, ಸಕ್ಕರೆಗಳಿಗೆ ಸಂಬಂಧಿಸಿದ ಇದನ್ನು ಬಿ-ಕಾಂಪ್ಲೆಕ್ಸ್ ಗುಂಪಿಗೆ ಸೇರಿದ ಜೀವಾತು ಎಂದು ಪರಿಗಣಿಸಿದೆ. ಪ್ರಾಣಿಗಳಲ್ಲಿ ಕೂದಲು ಉದುರುವುದನ್ನು ತಡೆಹಿಡಿಯುವ ಮತ್ತು ಚರ್ಮರೋಗನಿವಾರಣೆ ಮಾಡುವ ಜೀವಾತು ಇದೇ. ಹೆಕ್ಸ್‍ಹೈಡ ...

ಕುಟ್ಟವಲಕ್ಕಿ

ಅನ್ನದಂತೆ ಅವಲಕ್ಕಿಯೂ ಒಂದು ಜನಪ್ರಿಯ ಆಹಾರ. ಅವಲಕ್ಕಿಯನ್ನು ಮೊಸರಿನೊಂದಿಗೆ, ಉಪ್ಪಿನಕಾಯಿಯೊಂದಿಗೆ ಅಥವಾ ಒಗ್ಗರಣೆ ಹಾಕಿಯೂ ತಿನ್ನಬಹುದು.ಇಂಥ ಅವಲಕ್ಕಿ ಹೆಚ್ಚು ಸಮಯ ಉಪಯೋಗಿಸಲಾಗುವುದಿಲ್ಲ.ಆದ್ದರಿಂದ ಇಂಥ ಅವಲಕ್ಕಿಗೆ ಬದಲಾಗಿ ನಾವು ಕುಟ್ಟವಲಕ್ಕಿಯನ್ನು ಬಳಸಬಹದು. ಮಾರುಕಟ್ಟೆಯಲ್ಲಿ ಸಿಗುವ ದಪ್ಪ ಅಥವ ...

ಕ್ಯಾಲ್ಸಿಯಂ ಕಾರ್ಬೋನೇಟ್

ಕ್ಯಾಲ್ಸಿಯಂ ಕಾರ್ಬೋನೇಟ್ ಒಂದು ರಾಸಾಯನಿಕ. ಇದರ ಸೂತ್ರ CaCO3. ಇದು ಮೂರು ಮುಖ್ಯ ಅಂಶಗಳು ರೂಪುಗೊಂಡಿದೆ- ಇಂಗಾಲ, ಆಮ್ಲಜನಕ ಮತ್ತು ಕ್ಯಾಲ್ಸಿಯಂ.ಇದು ಬಂಡೆಗಳಲ್ಲಿ ಕಂಡುಬರುವ ಸಾಮಾನ್ಯ ಪದಾರ್ಥ. ಇವು ಮುತ್ತುಗಳು, ಕಲ್ಲಿದ್ದಲು ಚೆಂಡುಗಳು, ಮೊಟ್ಟೆಚಿಪ್ಪುಗಳು, ಸಮುದ್ರ ಜೀವಿಗಳ ಚಿಪ್ಪುಗಳು ಮತ್ತು ಬಸ ...

ಉಚ್ಛಿಷ್ಟ

ಉಚ್ಛಿಷ್ಟ ಎಂದರೆ ಊಟವಾದ ನಂತರ ಮತ್ತು ಎಲ್ಲರೂ ತಿನ್ನುವುದು ಮುಗಿಸಿದ ಮೇಲೆ ಉಳಿದುಕೊಂಡ ಊಟದ ತಿನ್ನದಿರದ ಬಿಸಿ ಅಥವಾ ತಣ್ಣಗಿನ ಶೇಷ. ತಿನ್ನಲರ್ಹವಲ್ಲವೆಂದು ಪರಿಗಣಿಸಲಾದ ಆಹಾರ ತುಣುಕುಗಳನ್ನು ಉಚ್ಛಿಷ್ಟವೆಂದು ಪರಿಗಣಿಸಲಾಗುವುದಿಲ್ಲ, ಬದಲಾಗಿ ತ್ಯಾಜ್ಯ ವಸ್ತುವೆಂದು ಪರಿಗಣಿಸಲಾಗುತ್ತದೆ. ಯಾವುದನ್ನಾದ ...

ಸಿಹಿ

ಸಿಹಿ ಮೂಲ ರುಚಿಗಳಲ್ಲಿ ಒಂದು. ಸಕ್ಕರೆ, ಬೆಲ್ಲದಂತಹ ಪದಾರ್ಥಗಳಿಂದ ಉಂಟಾಗುವ ರುಚಿ. ಹಣ್ಣುಗಳಲ್ಲಿರುವ ಸುಕ್ರೋಸ್ ಸಿಹಿ ರುಚಿಗೆ ಕಾರಣವಾಗಿರುತ್ತದೆ. ನಾಲಿಗೆಯ ತುದಿ ಭಾಗದಲ್ಲಿಯೇ ಸಿಹಿ ರುಚಿಗ್ರಾಹಿಗಳು ಇರುತ್ತವೆ. ಶುಭ ಸಮಾಚಾರ ಸಮಯಗಳಲ್ಲಿ ಸಿಹಿ ಸಂಭ್ರಮದ ಸಂಕೇತವಾಗಿದೆ. ಸಕ್ಕರೆ ಮತ್ತು ಬೆಲ್ಲಗಳು ಕ ...

ಹಮ್ಮಿಂಗ್ ಬರ್ಡ್

ಝೇಂಕರಿಸುವ ಅತಿ ಹೊಂದಿವೆ ಚಯಾಪಚಯ ಯಾವುದೇ homeothermic ಪ್ರಾಣಿ. ಆಹಾರದ ಕೊರತೆಯಿದ್ದಾಗ ಅದು ಶಕ್ತಿಯ ಸಂರಕ್ಷಣೆ, ಮತ್ತು ರಾತ್ರಿಯ ಆಹಾರವನ್ನು ಇರುವಾಗ, ಅವರು ಹೋಗಲು torpor, ಹೋಲುವ ರಾಜ್ಯದ ಸುಪ್ತ ತನ್ನ ಎಂದಿನ 1/15 ನೇ ಚಯಾಪಚಯ ದರ ನಿಧಾನಗೊಳಿಸುತ್ತದೆ. ಅವರು ಅವುಗಳ ಸೋಲಿಸುವುದನ್ನು ದಾಖಲಿಸಿ ...

ನೂತನ ಅಂತರಾಷ್ಟ್ರೀಯ ಅರ್ಥ ವ್ಯವಸ್ಥೆ

1970ರ ಅವಧಿಯಲ್ಲಿ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತಲೆದೂರಿತು. 1973ರಲ್ಲಿ ಪೆಟ್ರೋಲಿಯಂ ವಸ್ತುಗಳ ಬೆಲೆಯ ಹೆಚ್ಚಳದ ಬಿಸಿ ಎಲ್ಲ ರಾಷ್ಟ್ರಗಳಿಗೂ ತಟ್ಟಿತು. ತೃತೀಯ ಜಗತ್ತಿನ ರಾಷ್ಟ್ರಗಳು ವಿಶ್ವ ಅಭಿವೃದ್ಧಿಯ ಸಲುವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇದರ ಬಗ್ಗೆ ಗಂಭೀರ ಸಂಧಾನಗಳನ್ನು ಮತ ...

ಪರ್ಯಾಪ್ತ ಕೊಬ್ಬಿನ ಆಮ್ಲ

ಕೊಬ್ಬಿನ ಆಮ್ಲಗಳು ಆಹಾರದಲ್ಲಿ ಬೇಕಾಗಿರುವ ಅತ್ಯಾವಶ್ಯಕ ಪದಾರ್ಥಗಳು. ಕೊಬ್ಬಿನ ಆಮ್ಲಗಳು ಹೈಡ್ರೋಕಾರ್ಬನ್ ಸರಪಳಿ ಇರುವ ವೊನೋ ಕಾರ್ಬೋಕ್ಸೀಲಿಕ್ ಆಮ್ಲಗಳು. ಕೊಬ್ಬಿನ ಆಮ್ಲಗಳನ್ನು ಸಸ್ಯಗಳ ಬೀಜದ ಎಣ್ಣೆಗಳಲ್ಲಿ ಮತ್ತು ಜೀವಿಗಳ ಕೊಬ್ಬಿನಲ್ಲಿ ಕಾಣಬಹುದು. ಕೊಬ್ಬಿನ ಆಮ್ಲಗಳು ಎಣ್ಣೆ ಅಥವಾ ಕೊಬ್ಬುಗಳಲ್ಲಿ ...

ಚಮಚ

ಚಮಚ ವು ಹಿಡಿಕೆಯ ಕೊನೆಯಲ್ಲಿ ಅಂಡಾಕಾರದ ಅಥವಾ ದುಂಡನೆಯ, ಚಿಕ್ಕ ಆಳವಲ್ಲದ ಬೋಗುಣಿಯನ್ನು ಹೊಂದಿರುವ ಪಾತ್ರೆಯಾಗಿದೆ. ಒಂದು ಪ್ರಕಾರವಾದ ಕಟ್ಲರಿಯಾದ, ವಿಶೇಷವಾಗಿ ಮೇಜನ್ನು ಸ್ಥಾಪಿಸುವುದರ ಭಾಗವಾದ ಇದನ್ನು ಮುಖ್ಯವಾಗಿ ಬಡಿಸಲು ಬಳಸಲಾಗುತ್ತದೆ. ಚಮಚಗಳನ್ನು ಮಿಶ್ರಣಾಂಶಗಳನ್ನು ಅಳೆಯಲು, ಬೆರೆಸಲು, ಕಲಿಸ ...

ಆರ್ಡ್ವುಲ್ಫ್

ಮಾಂಸಾಹಾರಿ ಸ್ತನಿ. ನೆಲತೋಳ; ಇಳಾವ್ನಕ್ ದಕ್ಷಿಣ ಮತ್ತು ಪೂರ್ವ ಆಫ್ರಿಕ ದೇಶಗಳಲ್ಲಿ ವಾಸಿಸುತ್ತದೆ. ಆಕಾರದಲ್ಲಿ ಕತ್ತೆಕಿರುಬವನ್ನು ಹೋಲುತ್ತದೆ. ಆದರೆ ಹಿಂಗಾಲುಗಳು ಎತ್ತರವಾಗಿರುವುದರಿಂದ ತೋಳಕ್ಕಿಂತ ಎತ್ತರವಾಗಿ ನಿಲ್ಲುತ್ತದೆ. ಅದರ ಕೂದಲು ಹಳದಿ ಅಥವಾ ಕೆಂಪುಮಿಶ್ರ ಕಂದುಬಣ್ಣದಿಂದ ಕೂಡಿದ್ದು, ಒರಟಾ ...

ಹೊಗೆ

ಹೊಗೆ ಯು ಒಂದು ವಸ್ತುವು ದಹನ ಅಥವಾ ಉಷ್ಣಪರಿವರ್ತನೆಗೆ ಒಳಗಾದಾಗ, ಆ ದ್ರವ್ಯರಾಶಿಯೊಳಗೆ ಬೆರಕೆಯಾದ ಅಥವಾ ಒಳಸೇರಿದ ಗಾಳಿಯ ಪರಿಮಾಣದ ಜೊತೆಗೆ ಹೊರಸೂಸಲ್ಪಟ್ಟ ವಾಯುಗಾಮಿ ಘನ ಮತ್ತು ದ್ರವ ಪೃಥಕ್ಕಣ ದ್ರವ್ಯ ಮತ್ತು ಅನಿಲಗಳ ಸಂಗ್ರಹ. ಇದು ಸಾಮಾನ್ಯವಾಗಿ ಬೆಂಕಿಗಳ ಅಗತ್ಯವಿರದ ಉಪಉತ್ಪನ್ನವಾಗಿರುತ್ತದೆ, ಆದ ...

ಮೃದ್ವಸ್ಥಿ

ಮೃದ್ವಸ್ಥಿ ಎಂದರೆ ದೇಹದ ಕೆಲವು ಮೃದುಭಾಗಗಳಿಗೆ ಆಧಾರಭೂತವಾಗಿದ್ದು, ಆಕಾರ ಕೊಡುವ ಮತ್ತು ಮಡಿಸಿದರೆ ಮುರಿಯದ ಘನ ರೂsಪದ ಊತಕ. ಮೆಲ್ಲೆಲುಬು, ಮೆತ್ತೆಲುಬು, ಮೃದ್ವಸ್ಥಿ ಪರ್ಯಾಯ ನಾಮಗಳು. ಕಶೇರುಕಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಅಂಗಾಂಶ. ಇದು ಆಧಾರ ಅಂಗಾಂಶಗಳಲ್ಲೊಂದು. ಮೂಳೆಯಷ್ಟು ಗಟ್ಟಿ ಇಲ್ಲದಿದ ...

ಆರ್ಕನಿ ದ್ವೀಪಗಳು

ಸ್ಕಾಟ್ಲೆಂಡಿನ ಉತ್ತರ ಕರಾವಳಿಗೆ ೧೦೨ ಕಿಮೀ ದೂರದಲ್ಲಿವೆ. ಇವು ೯೦ಕ್ಕಿಂತಲೂ ಹೆಚ್ಚು ದ್ವೀಪಗಳಿಂದ ಕೂಡಿದ ದ್ವೀಪಸ್ತೋಮ. ಇವುಗಳಲ್ಲಿ ೨೪ ದ್ವೀಪಗಳಲ್ಲಿ ಮಾತ್ರ ಜನ ವಾಸಿಸುತ್ತಾರೆ. ಕೆಲವು ದ್ವೀಪಗಳಲ್ಲಿ ಏಕಸ್ವಾಮ್ಯಕೃಷಿಯನ್ನು ಕಾಣಬಹುದು. ಭೂಮಿ ತಗ್ಗು, ನೆಲ ಕಲ್ಲು. ಏನೂ ಬೆಳೆಯದಷ್ಟು ಬಂಜರು. ಮೀನುಗಾ ...

ಕಂಪನಕಾರಿ (ವೈಬ್ರೇಟರ್)

ಕಂಪನಕಾರಿ ಅಥವಾ ವೈಬ್ರೇಟರ್ ಕಂಪನಗಳನ್ನು ಉಂಟುಮಾಡುವ ಒಂದು ಯಂತ್ರ. ಹೆಚ್ಚಾಗಿ ಕಂಪನವನ್ನು ವಿದ್ಯುತ್ ಮೂಟಾರಿನ ಮೂಲಕ ಉತ್ಪಾದಿಸಲಾಗುತ್ತದೆ. ವೈಬ್ರೇಟರ್‌ಗಳಲ್ಲಿ ಹಲವು ಬಗೆಗಳಿವೆ. ಸಾವಾನ್ಯವಾಗಿ ಅವು ಮೊಬೈಲ್ ಫೋನು, ಪೇಜರ್, ಲೈಂಗಿಕ ಆಟಿಕೆಗಳು, ವಿಡಿಯೋ ಗೇಮ್ ಇತ್ಯಾದಿ ಸಲಕರಣೆಗಳ ಒಂದು ಭಾಗವಾಗಿರುತ ...

ಶಿಶುಜನನ

ಟೆಂಪ್ಲೇಟು:Infobox medical condition ಶಿಶುಜನನ, ಇದನ್ನು ಹೆರಿಗೆ ಮತ್ತು ಪ್ರಸವ, ಎಂದು ಕರೆಯುತ್ತಾರೆ ಮತ್ತು ಇದು ಗರ್ಭಧಾರಣೆಯ ಅಂತ್ಯವಾಗಿದ್ದು ಗರ್ಭಾಶಯದಿಂದ ಒಂದು ಅಥವಾ ಹೆಚ್ಚಿನಶಿಶುಗಳು ಹೊರಬರುತ್ತಾರೆ. 2015 ರಲ್ಲಿ ಸುಮಾರು 135 ಮಿಲಿಯನ್ ಜನನಗಳು ಜಾಗತಿಕವಾಗಿ ಸಂಭವಿಸಿವೆ. 37 ವಾರಗಳ ಗರ್ ...

ಕಲ್ಬಾಸು

ಕಲ್ಬಾಸು: ಲೇಬಿಯೊ ಜಾತಿಯ ಮೀನು. ಕಾಟ್ಲ, ರೋಹು, ಮೃಗಾಲ್ ಮುಂತಾದ ಪ್ರಮುಖ ಬಗೆಯ ಮೀನುಗಳ ಗುಂಪಿಗೆ ಸೇರಿದೆ. ಕಮ್ಮಚ್ಚಲು, ಕೆಮ್ಮೀನು, ಕದ್ದೊಳ್ಳು ಪರ್ಯಾಯ ನಾಮಗಳು. ಭಾರತದ ಎಲ್ಲ ಕಡೆಯೂ ಸಾಮಾನ್ಯವಾಗಿ ಕಾಣಬರುವ ಮೀನಿದು. ಮೈಸೂರಿನ ಕಾವೇರಿ ಮತ್ತು ಶಿಂಷಾ ನದಿಗಳಲ್ಲಿ ಇದೆ. ಇದು ಸುಮಾರು ೪" ಉದ್ದ ಬೆಳೆ ...

ಆರ್ಮಡ (ಸ್ಪೇನಿನ)

ಹದಿನಾರನೆಯ ಶತಮಾನದಲ್ಲಿ ಸ್ಪೇನಿನ ದೊಡ್ಡ ಚಕ್ರಾಧಿಪತ್ಯಕ್ಕೆ ಚಕ್ರವರ್ತಿಯಾಗಿದ್ದ ಫಿಲಿಪ್ನಿಗೂ ಇಂಗ್ಲೆಂಡಿನ ಪ್ರಾಟೆಸ್ಟಂಟ್ ರಾಣಿ ಎಲಿಜಬೆತ್ಗೂ ಬದ್ಧದ್ವೇಷವಿದ್ದು ಅದು ಪ್ರಕೋಪಗೊಳ್ಳುವ ಒಂದು ಸನ್ನಿವೇಶ ಒದಗಿತು. ಇಂಗ್ಲೆಂಡಿನ ಪ್ರಸಿದ್ಧ ನಾವಿಕನಾದ ಫ್ರಾನ್ಸಿಸ್ ಡ್ರೇಕ್ ೧೫೮೫-೮೬ರಲ್ಲಿ ಸ್ಪೇನ್ ಸಾಮ್ ...

ಅರುವತ್ತನಾಲ್ಕು ಶೀಲಗಳು

ಅರುವತ್ತನಾಲ್ಕು ಶೀಲಗಳು: ವೀರಶೈವಧರ್ಮದಲ್ಲಿ ನಿಷ್ಠೆಯುಳ್ಳವರು ಇವನ್ನು ಆಚರಿಸಬೇಕೆಂಬ ನಿಯಮವಿದೆ. ಪ್ರಖ್ಯಾತ ಶರಣರಾದ ಪಾಲ್ಕುರಿಕೆ ಸೋಮನಾಥ, ಸರ್ವಶೀಲೆ ಚೆನ್ನಮ್ಮ, ಈ ಶೀಲಗಳನ್ನು ಚಾಚೂ ತಪ್ಪದೆ ಆಚರಿಸುತ್ತಿದ್ದರೆಂದು ಪುರಾಣಗಳಲ್ಲಿ ಹೇಳಿದೆ.

ಸಂಶ್ಲೇಷಿತ ವಸ್ತು

ಕೃತಕ ವಸ್ತುಗಳನ್ನು ಸಂಶ್ಲೇ‌‌‌‌‌‌‌‌‌‌‍‍‍‍‍‍‍ಷಿತ ವಸ್ತುಗಳು ಎಂದೂ ಕರೆಯುತ್ತೇವೆ. ಜನಸಂಖ್ಯೆ ಸ್ಪೋಟದಿಂದ ಮತ್ತು ಸ್ವಾಭಾವಿಕ ವಸ್ತುಗಳು ಮಿತವಾಗಿ ದೊರೆಯುವುದರಿಂದ ಸ್ವಾಭಾವಿಕ ವಸ್ತುಗಳಿಗೆ ಪರ್ಯಯ ವಸ್ತುಗಳು ಅವುಗಳು ನಮ್ಮ ನಿತ್ಯ ಜೀವನದಲ್ಲಿ ಒಂದು ಭಾಗವಾಗಿದ್ದು ಜೊತೆಗೆ ಅನುಕೂಲಕರವಾಗಿದೆ.

ಡಿಸ್ಟಲೇಶನ

ದ್ರವ ರೂಪ ಮಿಶ್ರಣದ ಘಟಕಗಳನ್ನು ಆಯ್ದು ಬಾಷ್ಪೀಕರಣ ಮತ್ತು ಘನೀಕರಣ ಬೇರ್ಪಡಿಸುವ ಪ್ರಕ್ರಿಯೆಯನ್ನು ಶುದ್ಧೀಕರಣ ಎನ್ನುತ್ತಾರೆ. ಶುದ್ಧೀಕರಣದಿಂದ ಮಿಶ್ರಣದ ಘಟಕಗಳನ್ನು ಸಂಪೂರ್ಣ ಅಥವಾ ಭಾಗಶಃ ಬೇರ್ಪಡಿಸಬಹುದು. ಇವೆರಡೂ ಮಿಶ್ರಣದ ಘಟಕಗಳ ಚಂಚಲತೆಯ ಶೋಷಣೆಗಳನ್ನು ವ್ಯತ್ಯಾಸಗೊಳಿಸುತ್ತದೆ. ಕೈಗಾರಿಕಾ ರಸಾಯ ...

ಶೈವಲಗಳು

ಸಾ೦ಪೃದಾಯಿಕ ವಿಶಾಲದಲ್ಲಿ ತೆಗೆದುಕೊಂಡರೆ ಶೈವಲಗಳು ಎಂದರೆ ಸ್ವಂತ ಆಹಾರ ತಯಾರಿಸಬಲ್ಲ ಕ್ಲೋರೊಫಿಲ್ ಉಳ್ಳ ಸರಳ ಸಸ್ಯಗಳು. ಆದರೆ ಈ ಗುಂಪಿನಲ್ಲಿ ಸೇರಿದ್ದ ಜೀವಿಗಳು ಆಧುನಿಕ ವಿಧದಲ್ಲಿ ಮೊನೆರಾ ಹಾಗೂ ಪ್ರೊಟಿಸ್ಟ ಸಾಮ್ರಾಜ್ಯಗಳಿಗೆ ಹಂಚಿಹೋಗಿವೆ. ಹಳೆಯ ವಿಧಾನದಲ್ಲಿ ಇವುಗಳನ್ನು ತೆಗೆದು ಕೊಂಡರೆ ಸುಮಾರು ...

ಕಾಡುನಾಯಿ

ಕಾರ್ನಿವೊರ ಗಣದ ಕ್ಯಾನಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ವನ್ಯಪ್ರದೇಶವಾಸಿ ನಾಯಿಗಳಿಗಿರುವ ಸಾಮಾನ್ಯ ಹೆಸರು. ಪ್ರಮುಕವಾಗಿ ಏಷ್ಯದ ನಿವಾಸಿಯಾದ ಕ್ಯೂಆನ್ ಅಲ್ಪಿನಸ್, ಆಫ್ರಿಕದಲ್ಲಿ ಕಾಣಬರುವ ಲೈಕೇಯೋನ್ ಪಿಕ್ಟಸ್ ಮತ್ತು ಆಸ್ಟ್ರೇಲಿಯದಲ್ಲಿ ವಾಸಿಸುವ ಕೇನಿಸ್ ಡಿಂಗೋ ಎಂಬ ಮೂರು ಪ್ರಭೇದಗಳಿಗೆ ಈ ಹೆ ...

ರಮಝಾನ್

ರಂಜಾನ್ ಅಥವ ರಮದಾನ್ ಅರೇಬಿಕ್‌ ಭಾಷೆ ಯಲ್ಲಿ: رمضان ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ ಉಪವಾಸ ಇಸ್ಲಾಮ್‌ನ ಐದು ಕಂಬ ಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ ನ ಸಮಯದಲ್ಲಿ ಉಪವಾಸ ನಡೆಯುತ್ತದೆ. ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ ...

ರಮದಾನ್‌

ರಂಜಾನ್ ಅಥವ ರಮದಾನ್ ಅರೇಬಿಕ್‌ ಭಾಷೆ ಯಲ್ಲಿ: رمضان ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ ಉಪವಾಸ ಇಸ್ಲಾಮ್‌ನ ಐದು ಕಂಬ ಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ ನ ಸಮಯದಲ್ಲಿ ಉಪವಾಸ ನಡೆಯುತ್ತದೆ. ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ ...

ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು

ಎರಡನೆಯ ಮಹಾಯುದ್ಧಪುರ್ವದಲ್ಲಿಯೂ ಒಪ್ಪಂದಗಳ ಮೂಲಕ ತವರದ ಬೆಲೆಯ ಸ್ತಿಮಿತತೆಯನ್ನು ಕಾಪಾಡಲು ಪರಯತ್ನಗಳು ನಡೆದುವು. 1921ರಲ್ಲಿ ಮಲಯ, ನೆದರ್ಲೆಂಡ್ಸ ಮತ್ತು ಈಸ್ಟ ಇಂಡೀಸ್ಗಳು ಸೇರಿ ಬಾಂಡೂಂಗ್ ಪುಲ್ ಎಂಬ ವ್ಯವಸ್ಥೆಯನ್ನು ಮಾಡಿದ್ದುವು. 1929ರಲ್ಲಿ ತವರ ತಯಾರಿಕೆಗಾರರ ಸಂಘವೊಂದನ್ನು ಬ್ರಿಟನ್, ನೆದರ್ಲೆ ...

ಆಸ್ಟೆರಾಯ್ಡಿಯ

ಅಕಶೇರುಕಪ್ರಾಣಿಗಳ ಗುಂಪಿನ ಕಂಟಕಚರ್ಮಿ ವಂಶದ ಐದು ವರ್ಗಗಳಲ್ಲೊಂದು. ಎಲ್ಲ ಕಂಟಕ ಚರ್ಮಿಗಳೂ ಸಮುದ್ರವಾಸಿಗಳು. ಆಸ್ಟೆರಾಯ್ಡಿಯ ಪ್ರಾಣಿಗಳ ಶರೀರ ನಕ್ಷತ್ರಗಳನ್ನೇ ಹೋಲುವುದರಿಂದ ಇವುಗಳಿಗೆ ನಕ್ಷತ್ರಮೀನುಗಳು, ಕಡಲ ನಕ್ಷತ್ರಗಳು ಎಂಬ ರೂಢಿನಾಮಗಳು ಇವೆ. ಚರ್ಮ ಸುಣ್ಣಮಿಶ್ರಿತ ತಟ್ಟೆಗಳಂಥ ರಚನೆಗಳಿಂದ ಆವೃತ ...

ಉರ್ತಿಕಾರಿಯ

ಉರ್ತಿಕಾರಿಯ, ಸಾಮಾನ್ಯವಾಗಿ ಗುಳ್ಳೆಗಳು ಎಂದು ಕರೆಯಲಾಗುತ್ತದೆ, ತಿಳಿ ಕೆಂಪು, ಉಬ್ಬಿದ, ನವೆ ಉಬ್ಬುಗಳು ಇದರ ಗಮನಾರ್ಹ ಲಕ್ಷಣಗಳಾಗಿವೆ. ಚರ್ಮದ ಗುಳ್ಳೆಗಳು ಒಂದು ರೀತಿಯ. ಜೇನು ಕುಟುಕುಗಳಂತೆ ಉರಿ ಅಥವಾ ಕುಟುಕುವ ಸಂವೇದನೆಗೆ ಕಾರಣವಾಗಬಹುದು ಇವುಗಳಉ ಸಾಮಾನ್ಯವಾಗಿ ಅಲರ್ಜಿ ಪ್ರತಿಕ್ರಿಯೆಗಲಿಂಡ ಉಂಟಾಗ ...

ಆಯ್ಕೆ ಹಕ್ಕು

ಬಂಡವಾಳ ಪತ್ರಗಳನ್ನು ನಿರ್ದಿಷ್ಟ ಅವಧಿಯಲ್ಲಿ ಗೊತ್ತಾದ ಬೆಲೆಗೆ ಕೊಳ್ಳುವ, ಮಾರುವ ಹಕ್ಕು. ಷೇರು ಪೇಟೆಗಳಲ್ಲಿ ಕೆಲವರು ಈ ಬಗೆಯ ವಿಶಿಷ್ಟವಾದ ವ್ಯಾಪಾರವನ್ನು ಮಾಡಲು ಅವಕಾಶ ಕಲ್ಪಿಸಿಕೊಂಡು ಬೆಲೆಗಳು ಏರಲು ಅಥವಾ ಇಳಿಯಲು ದಾರಿ ಮಾಡುತ್ತಾರೆ. ಇದಕ್ಕೆ ಸಟ್ಟಾ ವ್ಯಾಪಾರವೆಂದು ಹೆಸರು. ತೇಜಿಮಂದಿಗಳು ಈ ಸಟ್ ...

ಗೆಕ್ಕೊ (ಹಲ್ಲಿ)

ಗೆಕ್ಕೊ ಸ್ಕ್ವಾಮೇಟ ಗಣದ ಗೆಕ್ಕೊನಿಡೆ ಕುಟುಂಬಕ್ಕೆ ಸೇರಿದ ಕೆಲವು ಸರೀಸೃಪಗಳಿಗಿರುವ ಸಾಮಾನ್ಯ ಹೆಸರು. ಉಷ್ಣವಲಯದಲ್ಲೆಲ್ಲಾ ಹರಡಿದೆ. ಭಾರತ, ದಕ್ಷಿಣ ಯುರೋಪ್, ಏಷ್ಯ, ಆಫ್ರಿಕ ಮತ್ತು ಅಮೆರಿಕಗಳಲ್ಲಿ 140ಕ್ಕೂ ಹೆಚ್ಚು ಪ್ರಭೇದಗಳು ಕಂಡುಬರುತ್ತವೆ. ಗೆಕೊ ಗೆಕೊ, ಫೆಲ್ಸುಮೊ ವಿನ್ಸೋನಿ, ಥಿಕಾಡ್ಯಾಕ್ಟೈಲಸ ...

ಅಲಕಪಾದಿಗಳು

ಸಿರ್ರಿಪೀಡಿಯ ಎಂದರೆ ಕೂದಲಿನಂತಹ ಕಾಲುಗಳುಳ್ಳ ಜೀವಿಗಳು. ಕ್ರಸ್ಟೇಷಿಯ ವರ್ಗದ ಒಂದು ಉಪವಿಭಾಗ. ಕುರುಳುಪಾದಿಗಳು. ಇವನ್ನು ಬಾರ್ನಕಲ್ಸ್‌ ಎಂದು ಕರೆಯುತ್ತಾರೆ. ಇವು ಸಾಮಾನ್ಯವಾಗಿ ಸಮುದ್ರದಲ್ಲಿ ತೇಲುವ ಮರದ ದಿಮ್ಮಿಗಳಿಗೂ ಹಡಗಿನ ತಳಕ್ಕೂ ಅಂಟಿಕೊಂಡು ಬದುಕುತ್ತವೆ. ಬಾರ್ನ್‌ಕಲ್‌ಗಳ ಪ್ರಭೇದಗಳಲ್ಲಿ ಸಾಮ ...

ಬಝರ್ಡ್

ಬಝರ್ಡ್ ಒಂದು ಬಗೆಯ ಹದ್ದು. ಬ್ಯೂಟಿಯೋನಿಡೀ ಕುಟುಂಬಕ್ಕೆ ಸೇರಿದೆ. ಬಸ್ಟಾಟರ್ ಟೀಸ ಇದರ ಶಾಸ್ತ್ರೀಯ ಹೆಸರು. ದೇಹದ ಬಣ್ಣ ಕಂದು. ಕತ್ತಿನ ಭಾಗದಲ್ಲಿ ಬಿಳಿಬಣ್ಣ. ಗಲ್ಲದ ಮೇಲೆ ಎರಡು ಕಪ್ಪು ಪಟ್ಟಿಗಳು. ಹೀಗೆ ಇದರ ಕಂದು ಬಿಳಿ-ಕಪ್ಪು ಮಿಶ್ರಣದಿಂದ ಈ ಹದ್ದನ್ನು ಸುಲಭವಾಗಿ ಗುರುತಿಸಬಹುದು. ಇದು ದಕ್ಷಿಣ ಭ ...

ಲಿಂಬ್ಬೆ ಹಣ್ಣು

ಲಿಂಬೆಹಣ್ಣು ನಮ್ಮ ಎಲ್ಲರಿಗೂ ತಿಳಿದ ಪಾನಕ ಮಾಡುವ ಹಣ್ಣು. ಆದರೆ ಈ ಗಜಲಿಂಬೆಯೂ ಕೂಡಾ ಪಾನಕ ಮತ್ತು ಉಪ್ಪಿನ ಕಾಯಿ ಮಾಡುವ ಹಣ್ಣಾಗಿದೆ. ಸಾಮಾನ್ಯವಾಗಿ ಲಿಂಬೆಹಣ್ಣು ಲಾಡು ಗಾತ್ರದಲ್ಲಿರುತ್ತದೆ. ಈ ಗಜಲಿಂಬೆ ಮುಸಂಬಿಯ ಗಾತ್ರದಲ್ಲಿ ಇರುತ್ತದೆ. ಲಿಂಬೆ ಗಿಡಗಳ ಮೇಲೆ ಬೆಳೆಯುತ್ತದೆ. ಆದರೆ ಗಜಲಿಂಬೆ ನೆಲಕ್ಕ ...

ಗ್ಯಾಲ್ವನೀಕರಣ

ಕಬ್ಬಿಣದ ಇಲ್ಲವೇ ಉಕ್ಕಿನ ಪದಾರ್ಥಗಳಲ್ಲಿನ ಫೆರ್ರಸ್ ತಳಕ್ಕೆ ತುಕ್ಕು ಹಿಡಿಯದಂತೆ ಮಾಡಲು ಅವುಗಳಿಗೆ ತೆಳು ಪದರವನ್ನು ಲೇಪಿಸಲು ಬಳಸುವ ವಿವಿಧ ತಂತ್ರಗಳ ಸಾಮೂಹಿಕ ಹೆಸರು.